ಮುಖ್ಯಮಂತ್ರಿ ಇಂದು ಜಿಲ್ಲೆಯಲ್ಲಿ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಜಿಲ್ಲೆಯಲ್ಲಿದ್ದು ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಕುಂಡಂಕುಳಿ ಫಾರ್ಮರ್ಸ್ ಬ್ಯಾಂಕ್ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ನಿರ್ವಹಿಸಿದರು.  ಅನಂತರ ಪೆರಿಯಾಟಡ್ಕಕ್ಕೆ ತೆರಳಿದ ರು. ಸಂಜೆ ೩.೩೦ಕ್ಕೆ ವೆಳ್ಳಿಕ್ಕೋತ್, ೫.೩೦ಕ್ಕೆ ಕಾಲಿಕಡವ್ ಎಂಬಿಡೆಗಳಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವರು. ೪.೩೦ಕ್ಕೆ ಮಡಿಕೈ ಕಾಞಿರಪೊಯಿಲ್ ಸರಕಾರಿ ಹೈಯ ರ್ ಸೆಕೆಂಡರಿ ಶಾಲೆಯ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ನಿರ್ವಹಿಸಲಿದ್ದಾರೆ. ಹಲವು ತಿಂಗಳುಗಳ ಬಳಿಕ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿದ್ದಾರೆ.

You cannot copy contents of this page