ರೈಲಿನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆತ್ನಆರೋಪಿ ಬಂಧನ: ಪೊಲೀಸರ ಕೈಯಿಂದಲೂ ಪರಾರಿಗೆ ಯತ್ನ

ಕಾಸರಗೋಡು: ರೈಲು ಗಾಡಿಯಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಯುವP ನೋರ್ವ ಲೈಂಗಿಕ ದೌರ್ಜನ್ಯಕ್ಕೆ  ಮುಂದಾದ ಘಟನೆ ನಡೆದಿದೆ. ಈ ಸಂಬಂಧ ಕಾಸರಗೋಡು ನಾಟೆಕಲ್ಲು ಬಿಸ್ಮಿಲ್ಲ ಹೌಸ್‌ನ ಇಬ್ರಾಹಿಂ ಬಾದುಶ (28) ಎಂಬಾತನನ್ನು ಕಾಸರಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಇಂದು ಮುಂಜಾನೆ ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್  ರೈಲಿನ ಜನರಲ್ ಬೋಗಿಯಲ್ಲಿ ಘಟನೆ ನಡೆದಿದೆ. ೫ ಗಂಟೆಗೆ ರೈಲು ನೀಲೇಶ್ವರಕ್ಕೆ ತಲುಪಿದಾಗ ಅದೇ ರೈಲಿನಲ್ಲಿದ್ದ ಯುವಕ ವಿದ್ಯಾರ್ಥಿನಿಯನ್ನು ಬಿಗಿದಪ್ಪಿ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆಂದು ದೂರಲಾಗಿದೆ. ಯುವಕನ ಕೈಯಿಂದ ಬಿಡಿಸಿಕೊಂಡ ಯುವತಿ ರೈಲ್ವೇ ಪೊಲೀಸರಿಗೆ ವಿಷಯ ತಿಳಿಸಿದ್ದಳು. ಪೊಲೀಸರು ತಲುಪುವಷ್ಟರಲ್ಲಿ ಯುವಕ ಕಾಞಂಗಾಡ್‌ನಲ್ಲಿ ಮತ್ತೊಂದು ಬೋಗಿಗೆ ಹತ್ತಿದ್ದನು.  ಅನಂತರ ಕಾಸರ ಗೋಡು  ರೈಲ್ವೇ ನಿಲ್ದಾಣದಲ್ಲಿ ಇಳಿದ ತಕ್ಷಣ ಯುವಕನನ್ನು ಎಸ್‌ಐ ಎಂ.ವಿ. ಪ್ರಕಾಶನ್, ಸಿಪಿಒಗಳಾದ ಪ್ರವೀಣ್ ಪೀಟರ್, ಪ್ರಶಾಂತ್, ಆರ್‌ಪಿಎಫ್ ಎಎಸ್‌ಐ ಅಜಿತ್ ಎಂಬವರು ಸೇರಿ ಸೆರೆಹಿಡಿದಿದ್ದಾರೆ. ಇದೇ ವೇಳೆ ರೈಲ್ವೇ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಂತೆ  ಪೊಲೀಸರನ್ನು ದೂಡಿ ಆರೋಪಿ ಪರಾರಿ ಯಾಗಿದ್ದನು. ಅಂಗಿ ಕಳಚಿ ಓಡಿದ  ಆತನನ್ನು ಪೊಲೀಸರು ಭಾರೀ ಸಾಹಸದಿಂದ ಹಿಂಬಾಲಿಸಿ ಸೆರೆಹಿಡಿದಿದ್ದಾರೆ.

You cannot copy contents of this page