ವಯನಾಡಿನಲ್ಲಿ ಪ್ರಿಯಾಂಕಾ ವಾದ್ರಾ ವಿರುದ್ಧ ಸತ್ಯನ್ ಮುಕೇರಿ ಸಿಪಿಐ ಅಭ್ಯರ್ಥಿ

ತಿರುವನಂತಪುರ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರ ರಾಜೀನಾಮೆಯಿಂದಾಗಿ ತೆರವುಗೊಂಡಿರುವ ವಯನಾಡು ಲೋಕಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ರಿಯಾಂಕಾ ವಾದ್ರಾರ ವಿರುದ್ಧ ಪಕ್ಷದ ಹಿರಿಯ ನೇತಾರ ಸತ್ಯನ್ ಮುಕೇರಿಯವರನ್ನು ಎಡರಂಗ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿಪಿಐ ತೀರ್ಮಾನಿಸಿದೆ.

ಸತ್ಯನ್ ಮುಕೇರಿ ಸಿಪಿಐ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಾಗಿ ದ್ದಾರೆ. ನಿನ್ನೆ ಸೇರಿದ ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ಚೇಲಕ್ಕರ ವಿಧಾನಸಭಾ ಉಪಚುನಾವಣೆಯಲ್ಲಿ ಯು.ಆರ್. ಪ್ರದೀಪ್‌ರನ್ನು ಎಡರಂಗದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸಿಪಿಎಂ ತೀರ್ಮಾನಿಸಿದೆ.

RELATED NEWS

You cannot copy contents of this page