ದೀಪಾವಳಿ ಸಹಿತದ ಹಬ್ಬದ ವೇಳೆ ಪಟಾಕಿ ಸಿಡಿಸಲು ನಿಯಂತ್ರಣ

ತಿರುವನಂತಪುರ: ವಾತಾವರಣ ಮಲಿನೀಕರಣ ನಿಯಂತ್ರಿಸುವುದ ರಂಗವಾಗಿ ಸುಡುಮದ್ದನ್ನು ಸಿಡಿಸುವ ಸಮಯಗಳಲ್ಲಿ ನಿಯಂತ್ರಣ ಏರ್ಪಡಿಸ ಲಾಗಿದೆ. ದೀಪಾವಳಿ ಹಬ್ಬದ ಸಂದರ್ಭ ದಲ್ಲಿ ಸುಡುಮದ್ದು ಸಿಡಿಸುವುದಕ್ಕೆ ರಾತ್ರಿ ೮ರಿಂದ 10ರವರೆಗೆ ಕ್ರಿಸ್ಮಸ್, ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.50೦ರಿಂದ 12.30ರವರೆಗೆ ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ಆದೇಶ ಹಾಗೂ ರಾಜ್ಯ ಮಲಿನೀಕರಣ ನಿಯಂತ್ರಣ ಇಲಾ ಖೆಯ ನಿರ್ದೇಶದ ಆಧಾರದಲ್ಲಿ ಈ ಆದೇಶ ಸರಕಾರ ಹೊರಡಿಸಿದೆ. ವಾತಾ ವರಣಕ್ಕೆ ಹಾನಿಯಾಗದ ರೀತಿಯ ಪಟಾಕಿಗಳನ್ನು ಸಿಡಿಸುವ ಬಗ್ಗೆ, ನಿರ್ದಿಷ್ಟ ಸಮಯ ಕಳೆದು ಪಟಾಕಿ ಸಿಡಿಸುವ ಬಗ್ಗೆ ತಿಳಿದು ಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಹಾ ಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಗೃಹ ಇಲಾಖೆ ಆದೇಶ ನೀಡಿದೆ.

You cannot copy contents of this page