ಎಂಡಿಎಂಎ ಸಹಿತ ನಟಿ ಸೆರೆ
ಕೊಲ್ಲಂ: ಎಂಡಿಎಂಎ ಸಹಿತ ಖ್ಯಾತ ಸೀರಿಯಲ್ ನಟಿಯನ್ನು ಬಂಧಿಸಲಾಗಿದೆ. ಪರವೂರು ಚಿರಕ್ಕರ ಪಂಚಾಯತ್‌ನ ಒಳುಗುಪಾರ ನಂದನ ನಿವಾಸಿ ಶಮ್ನತ್ ಅಲಿಯಾಸ್ ಪಾರ್ವತಿ (36)ಯನ್ನು ಪರವೂರ್ ಇನ್ಸ್‌ಪೆಕ್ಟರ್ ಬಂಧಿಸಿದ್ದಾರೆ. ಈಕೆಯ ಮನೆಯಿಂದ ಮೂರು ಗ್ರಾಂ ಎಂಡಿಎಂಎಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈಕೆಗೆ ಮಾದಕ ಪದಾರ್ಥ ಸಾಗಾಟ ತಂಡದೊಂದಿಗೆ ಸಂಪರ್ಕವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಕೆಯನ್ನು ಇಂದು ನ್ಯಾಯಾಲಯ ಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.