ಕೇಂದ್ರ ಸಚಿವ ಶಿವ್ರಾಜ್ ಸಿಂಗ್ ಚೌಹಾಣ್ಗೆ ಮಹತ್ವದ ಜವಾಬ್ದಾರಿ ನೀಡಿದ ಪ್ರಧಾನಿ
ನವದೆಹಲಿ: ಕೇಂದ್ರ ಸಚಿವ ಶಿವರಾಜ್ಸಿಂಗ್ ಚೌಹಾಣ್ರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಚ್ಚಿನ ಅಧಿಕಾರಗಳೊಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ.
ಕೃಷಿ, ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಶಿವ್ರಾಜ್ ಸಿಂಗ್ ಚೌಹಾಣ್ರ ಅಧ್ಯಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲ್ವಿಚಾರಣಾ ಗುಂಪು ರಚಿಸಿದ್ದು, ಇದು ಬಜೆಟ್ನಲ್ಲಿ ಘೋಷಿಸಲಾದ ಯೋಜನೆಗಳು ಹಾಗೂ ಪ್ರಧಾನಿ ಘೋಷಿಸಿರುವ ಯೋಜನೆಗಳು ಇತ್ಯಾದಿಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ಪರಿಶೀಲಿಸುವ ಹೊಣೆಗಾರಿಕೆಯನ್ನು ಕೇಂದ್ರ ಸಚಿವ ಚೌಹಾಣ್ರಿಗೆ ವಹಿಸಿಕೊಡಲಾಗಿದೆ.