ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವಕ್ಕೆ ಚಾಲನೆ
ಮಂಜೇಶ್ವರ: 2024-25 ನೇ ಅಧ್ಯಯನ ವರ್ಷದ ಉಪ ಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಆರಂಭಗೊAಡಿತು. ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಜ್ಞಾನೋತ್ಸವವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್, ಕ್ಯಾಥೋಲಿಕ್ ಬೋರ್ಡ್ ಮ್ಯಾನೇಜರ್ ಡಾಕ್ಟರ್ ಪ್ರವೀಣ್ ಲಸ್ರೋಡೋ, ಮಂಜೇಶ್ವರ ಉಪವಿದ್ಯಾಧಿಕಾರಿ ರಾಜಗೋಪಾಲ್, ಜನಪ್ರತಿನಿಧಿಗಳಾದ ಜಯರಾಂ ಬಳ್ಳಂ ಕುಡೇಲ್, ರುಖಿಯಾ ಸಿದ್ದೀಖ್, ಜ್ಯೋತಿ, ಅಬ್ದುಲ್ ಲತೀಫ್, ಕಮಲಾಕ್ಷಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ಶಾಲೆಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಪರಿಸರ ವಿಜ್ಞಾನ ಹಾಗೂ ಇನ್ನಿತರ ವಿಧದ ವಿಷಯಗಳಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.ಪ್ರತಿಭೆಗಳ ಪ್ರದರ್ಶನ ಮತ್ತು ಅನೇಕ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಜ್ಞಾನವನ್ನು ಪ್ರೋತ್ಸಾಹಿಸಿದ ಈ ಸಮಾರಂಭವು ವಿಜ್ಞಾನದ ಮಹತ್ವವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಮೂರು ದಿನಗಳಲ್ಲಾಗಿ ನಡೆಯುವ ವಿಜ್ಞಾನೋತ್ಸವ ಅಕ್ಟೋಬರ್ 28ಕ್ಕೆ ಸಮಾಪ್ತಿಗೊಳ್ಳಲಿದೆ.