ರೇಶನ್ ಮಸ್ಟರಿಂಗ್: 5ರ ತನಕ ವಿಸ್ತರಣೆ
ತಿರುವನಂತಪುರ: ಆದ್ಯತಾ ವಿಭಾಗಕ್ಕೆ ಸೇರಿದ ಹಳದಿ ಮತ್ತು ಪಿಂಕ್ ರೇಶನ್ ಕಾರ್ಡ್‌ಗಳ ಸದಸ್ಯರು ಮಸ್ಟರಿಂಗ್ ನಡೆಸಲಿರುವ ದಿನಾಂ ಕವನ್ನು ರಾಜ್ಯ ಆಹಾರ ಮತ್ತು ನಾಗರಿಕಾ ಸರಬರಾಜು ಇಲಾಖೆ ಮತ್ತೆ ನವಂಬರ್ ೫ರ ತನಕ ವಿಸ್ತರಿಸಿದೆ.
ರಾಜ್ಯದಲ್ಲಿ 25.19 ಲಕ್ಷ ಮಂದಿ ತಮ್ಮ ಮಸ್ಟರಿಂಗ್ ನಡೆಸಲು ಬಾಕಿ ಉಳಿದು ಕೊಂಡಿದ್ದಾರೆ. ರಾಜ್ಯದಲ್ಲಿ ಹಳದಿ ಮತ್ತು ಪಿಂಕ್ ರೇಶನ್ ಕಾರ್ಡ್‌ಗಳಲ್ಲಾಗಿ ಒಟ್ಟು 1.53 ಕೋಟಿ ಸದಸ್ಯರಿದ್ದು, ಆ ಪೈಕಿ1.25 ಕೋಟಿ ಮಂದಿ (ಶೇಕಡಾ 83.62) ಮಾತ್ರವೇ ಮಸ್ಟರಿಂಗ್ ನಡೆಸಿದ್ದಾರೆ. ಬೆರಳಚ್ಚು ಮತ್ತು ಕಣ್ಣಿನ ಗುರುತುಗಳು ಪರಸ್ಪರ ಹೊಂದಾಣಿಕೆ ಉಂಟಾಗದ ಕಾರಣ ಹಲವರಿಗೆ ಮಸ್ಟರಿಂಗ್ ನಡೆಸಲು ಸಾಧ್ಯವಾಗಿಲ್ಲ.