ಸರ್ವೀಸ್ ರಸ್ತೆಯಲ್ಲಿರುವ ಚರಂಡಿಯ ಸ್ಲ್ಯಾಬ್ ಕುಸಿತ: ವಾಹನ ಅಪಘಾತ ಭೀತಿ

ಉಪ್ಪಳ: ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಲಾದ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲ್ಯಾಬ್ ಅಲ್ಲಲ್ಲಿ ಹಾನಿಗೊಂಡು ಕುಸಿದು ಬೀಳುವ ಸಾಧ್ಯತೆಯಿದ್ದು ಇದರಿಂದ ವಾಹನ ಸಂಚಾರ ಭೀತಿ ಸೃಷ್ಟಿಯಾಗಿದೆ. ಹೊಸಂಗಡಿ, ಉಪ್ಪಳ ಸಹಿತ ವಿವಿಧೆಡೆಗಳ ಸರ್ವೀಸ್ ರಸ್ತೆಯಲ್ಲಿ ಸ್ಲಾಬ್ ಹಾನಿಗೊಂಡಿದೆ. ವಾಹನಗಳಿಗೆ ಸೈಡ್ ನೀಡುವ ವೇಳೆ ದೊಡ್ಡ ವಾಹನಗಳು ಚರಂಡಿ ಸ್ಲ್ಯಾಬ್ ಮೇಲಿನಿಂದ ಸಂಚರಿಸುವುದೇ ಹಾನಿಯಾಗಲು ಕಾರಣವೆಂದು ದೂರಲಾಗಿದೆ. ಹಾನಿಗಿಡಾದ ಚರಂಡಿ ಒಳಗಡೆ ಕುಸಿದು ಬಿದ್ದಲ್ಲಿ ವಾಹನ ಸಂಚಾರದ ವೇಳೆ ಅಪಘಾತ ಉಂಟಾಗಬಹುದಾಗಿದೆ. ಹೊಸಂಗಡಿಯಲ್ಲಿ ಹಾನಿಗೀಡಾಗಿ ಅಪಾಯದಂಚಿನಲ್ಲಿರುವ ಸ್ಲ್ಯಾಬ್ ಬಳಿ ಭದ್ರತೆಗಾಗಿ ಡಿವೈಡರನ್ನು ಇರಿಸಲಾಗಿದೆ. ಸಂಬAಧಪಟ್ಟ ಹೆದ್ದಾರಿ ಇಲಾಖೆ ಉದ್ಯೋಗಸ್ಥರು ಹಾನಿಗೀಡಾದ ಸ್ಥಳದಲ್ಲಿ ದುರಸ್ತಿ ಗೊಳಿಸಿ ಅಪಾಯವನ್ನು ತಪ್ಪಿಸಬೇ ಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page