ಪೆರ್ಮುದೆಯ ಹೊಟೇಲ್ ವ್ಯಾಪಾರಿ ಮನೆಯಿಂದ ಕಳವು ಆರೋಪಿಗಳಿಗಾಗಿ ಶೋಧ

ಕುಂಬಳೆ: ಪೆರ್ಮುದೆಯ ಹೊಟೇಲ್ ವ್ಯಾಪಾರಿ ರಾಮಕೃಷ್ಣರ ಮನೆಯಿಂದ ನಡೆದ ಕಳವು ಪ್ರಕರಣ ಬಗ್ಗೆ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮನೆಯಿಂದ ಬೆಳ್ಳಿ ಆಭರಣಗಳು, 20 ಸಾವಿರ ರೂಪಾಯಿ ಹಾಗೂ ದಾಖಲೆ ಪತ್ರಗಳು ಕಳವಿಗೀಡಾದ ಬಗ್ಗೆ ದೂರಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆ ವೇಳೆ ಕಳವು ನಡೆದಿದೆ.  ಹೊಟೇಲ್‌ನಿಂದ ರಾಮಕೃಷ್ಣ ಅಂದು ರಾತ್ರಿ ಮನೆಗೆ ತಲುಪಿದಾಗ ಕಳವು ನಡೆದ ವಿಷಯ ತಿಳಿದು ಬಂದಿದೆ.ಮನೆಯ ಮುಂಭಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಸೊತ್ತುಗಳನ್ನು ದೋಚಿದ್ದಾರೆ. ಕುಂಬಳೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಮನೆ ಪರಿಸರ ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. 2017ರಲ್ಲೂ ಇದೇ ಮನೆಯಲ್ಲಿ ಕಳವು ನಡೆದಿತ್ತು. ಅಂದು ಚಿನ್ನಾಭರಣ ಹಾಗೂ ಹಣವನ್ನು ಕಳ್ಳರು ದೋಚಿದ್ದರು.

RELATED NEWS

You cannot copy contents of this page