ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ: ದ್ವಿತೀಯ ದಿನದ ವಿಜೇತ ಶಾಲೆಗಳು
ಕಾಸರಗೋಡು: ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವದ ದ್ವಿತೀಯ ದಿನ ಯುಪಿ ವಿಭಾಗದಲ್ಲಿ 33 ಅಂಕಗಳೊಂದಿಗೆ ಜಿಯುಪಿಎಸ್ ಅಡ್ಕತ್ತಬೈಲ್, ಜಿಯುಪಿಎಸ್ ಕೋಳಿಯಡ್ಕ ಶಾಲೆ ಪ್ರಥಮ ಸ್ಥಾನದಲ್ಲಿದೆ. ಎಲ್‌ಪಿ ವಿಭಾಗದಲ್ಲಿ 51 ಅಂಕ ಪಡೆದ ಸೈಂಟ್ ಮೇರೀಸ್ ಎಎಲ್‌ಪಿ ಶಾಲೆ ಮೇರಿಪುರಂ ಪ್ರಥಮ ಸ್ಥಾನದಲ್ಲಿದ್ದರೆ, ಹೈಸ್ಕೂಲ್ ವಿಭಾಗದಲ್ಲಿ 141 ಅಂಕದೊಂದಿಗೆ ಚಟ್ಟಂಚಾಲ್ ಸಿ.ಎಚ್‌ಎಸ್‌ಎಸ್, ಹೈಯರ್ ಸೆಕೆಂಡರಿಯಲ್ಲಿ 146 ಅಂಕ ಪಡೆದು ಚಟ್ಟಂಚಾಲ್ ಶಾಲೆ ಪ್ರಥಮ ಸ್ಥಾನದಲ್ಲಿ ಮುಂದು ವರಿಯುತ್ತಿದೆ.
ಸಂಸ್ಕೃತೋತ್ಸವದಲ್ಲಿ 75 ಅಂಕ ಪಡೆದ ಮುನ್ನಾಡ್ ಎಯುಪಿಎಸ್, ಯುಪಿ ವಿಭಾಗದಲ್ಲಿ ಪ್ರಥಮ ಸ್ಥಾನ, ಹೈಸ್ಕೂಲ್ ವಿಭಾಗದಲ್ಲಿ ಜಿ.ಎಚ್ ಎಸ್ ಮುನ್ನಾಡ್ 65 ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಯುಪಿ ಅರೆಬಿಕ್‌ನಲ್ಲಿ ಮೊಗ್ರಾಲ್ ಪುತ್ತೂರು ಜಿಎಚ್‌ಎಸ್ 50 ಅಂಕದೊಂದಿಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದು, ಹೈಸ್ಕೂಲ್ ವಿಭಾಗದಲ್ಲಿ 88 ಅಂಕ ಪಡೆದ ನಾಯಮ್ಮಾರ್‌ಮೂಲೆ ಶಾಲೆ ಪ್ರಥಮ ಸ್ಥಾನದಲ್ಲಿ ಮುಂ ದುವರಿಯುತ್ತಿದೆ.