ಪೂರ್ತಿಯಾಗದ ಗಿಳಿವಿಂಡು ಸಭಾಂಗಣ ಗೋವಿಂದ ಪೈಗಳಿಗೆ ಅವಮಾನ-ಬಿಜೆಪಿ ಆರೋಪ

ಮಂಜೇಶ್ವರ: ಪ್ರಥಮ ರಾಷ್ಟ್ರಕವಿ  ಮಂಜೇಶ್ವರ ಗೋವಿಂದ ಪೈ ನಿವಾಸ ಪಕ್ಕದಲ್ಲಿ ಜನತೆಯ ತೆರಿಗೆ ಹಣದಲ್ಲಿ ನಿರ್ಮಿಸಲಾರಂಭಿಸಿದ ಸಭಾಂಗಣ ಗಿಳಿವಿಂಡು 10 ವರ್ಷ ಸಂದರೂ ಇನ್ನೂ ಪೂರ್ತಿಯಾಗದೆ ನಾಡಿಗೆ, ಸ್ಥಳೀಯ ಕನ್ನಡಿಗರಿಗೆ, ಕನ್ನಡ ಕಾರ್ಯಕ್ರಮಗಳಿಗೆ, ಭಾಷಾ ಸಂಗಮ ಭೂಮಿಯ ಭಾಷಾ ಚಟುವಟಿಕೆಗಳಿಗೆ ಅಲಭ್ಯವಾಗಿರುವುದು ಮಂಜೇಶ್ವರ ಗೋವಿಂದ ಪೈಗಳಿಗೆ ಸರಕಾರ ಮಾಡುವ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಆರೋಪಿಸಿದ್ದಾರೆ. ಗೋವಿಂದ ಪೈಗಳ ಸಾಧನೆಗೆ ಪ್ರತಿಬಿಂಬವಾಗಿ ನೂರಾರು ಕನ್ನಡ ಅಭಿಮಾನಿಗಳಿಗೆ, ಸ್ಥಳೀಯ ಕಲಾ-ಸಾಂಸ್ಕೃತಿಕ ರಂಗಕ್ಕೆ ಬೆಳಕಾಗಬೇಕಿದ್ದ ಸುಸಜ್ಜಿತ ಸಭಾಂಗಣವಾಗಿ ಜಿಲ್ಲೆಗೆ ಮಾದರಿಯಾಗಬೇಕಾದ ಸಭಾಂಗಣದ ನಿರ್ಮಾಣದಲ್ಲಿ ಸರಕಾರ, ಅಕಾಡೆಮಿಯ ಅನಾಸ್ಥೆ ಕನ್ನಡಿಗರಿಗೆ ಮಾತ್ರವಲ್ಲ ಇದು ನೇರವಾಗಿ ಗೋವಿಂದ ಪೈಗಳಿಗೆ ಮಾಡುತ್ತಿರುವ ಅವಮಾನ ಎಂದು ಅವರು ಅಭಿಪ್ರಾಯಪಟ್ಟರು.  ಕೇರಳ ಸರಕಾರ ಹಾಗೂ ಶಾಸಕರ ಇಚ್ಛಾ ಶಕ್ತಿಯ ಕೊರತೆ, ಜಿಲ್ಲಾಧಿಕಾರಿ ಅಧ್ಯಕ್ಷರಾ ಗಿರುವ  ಸಮಿತಿಯ ಗುರಿ ಇಲ್ಲದ ಯೋಜನೆ, ಅಕಾಡೆಮಿಯ ಬೇಜವಾಬ್ದಾರಿತನ ಸಭಾಂಗಣ ಈಗಲೂ ಪಾಳು ಬೀಳುವುದಕ್ಕೆ  ಕಾರಣ ಎಂದು ಬಿಜೆಪಿ ಆರೋಪಿಸಿದೆ. ಸಭಾಂಗಣ ಕಾಮಗಾರಿ ಕೂಡಲೇ ಪೂರ್ತಿಗೊ ಳಿಸಿ, ಸುಸಜ್ಜಿತ ಸಭಾಂಗಣವನ್ನು ಕನ್ನಡ ಕಲಾ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಮೀಸಲಿಡಬೇ ಕೆಂದು ಆದರ್ಶ್ ಬಿ.ಎಂ. ಆಗ್ರಹಿಸಿದ್ದಾರೆ. ಸರಕಾರದ ಕನ್ನಡ ವಿರೋಧಿ ನೀತಿಯ ಭಾಗವೇ ಇದು ಎಂದು ಬಿಜೆಪಿ ಪ್ರಶ್ನಿಸಿದೆ. ಬಿಜೆಪಿ ಮಂಡಲ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಲಾಯಿತು.

ಮುಖಂಡರಾದ ಮಣಿಕಂಠ ರೈ, ಎ.ಕೆ. ಕಯ್ಯಾರ್, ಯಾದವ್ ಬಡಾಜೆ, ಸದಾಶಿವ ಚೇರಾಲ್,  ಲೋಕೇಶ್ ನೋಂಡ, ಜಯಲಕ್ಷ್ಮಿ ಭಟ್, ಸುಬ್ರಹ್ಮಣ್ಯ ಭಟ್, ಪದ್ಮನಾಭ ರೈ, ಹರಿಶಂದ್ರ ಎಂ, ಜಗದೀಶ್ ಚೆಂಡೇಲ್, ಚಂದ್ರಾವತಿ ಶೆಟ್ಟಿ, ಮಂಜುನಾಥ್ ಬಾಯಾರು, ತುಳಸಿ  ಕುಮಾರಿ ಹಾಗೂ ಜನಪ್ರತಿನಿಧಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಯತಿರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ. ಭಟ್ ವಂದಿಸಿದರು.

You cannot copy contents of this page