ಕರುನಾಗಪಳ್ಳಿ ನಗರಸಭಾ ಚೆಯರ್‌ಮೆನ್ ವಿರುದ್ಧ ಲೈಂಗಿಕ ಆರೋಪ
ಕೊಲ್ಲಂ: ಸಿಪಿಎಂ ಮುಖಂಡ, ಕೊಲ್ಲಂ ಕರುನಾಗಪಳ್ಳಿ ನಗರಸಭಾ ಚೆಯರ್‌ಮೆನ್ ಕೋಟಯಿಲ್ ರಾಜು ವಿರುದ್ಧ ಲೈಂಗಿಕ ಆರೋಪ ಕೇಳಿ ಬಂದಿದೆ. ತಾತ್ಕಾಲಿಕ ನೌಕರೆಯೊಂದಿಗೆ ರಾಜು ಅವಾಚ್ಯವಾಗಿ ವರ್ತಿಸಿದರೆಂಬ ಆರೋಪದಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚೆಯರ್‌ಮೆನ್ ವಿರುದ್ಧ ಪಕ್ಷ ಕ್ರಮಕ್ಕೆ ಮುಂದಾಗಿದ್ದು, ಇದರಿಂದ ರಾಜುವಿಗೆ ಆ ಸ್ಥಾನ ನಷ್ಟಗೊಳ್ಳುವ ಸ್ಥಿತಿ ಉಂಟಾಗಿದೆ. ರೋಗ ಬಾಧಿತನಾದ ಪತಿಯ ಚಿಕಿತ್ಸೆಗಾಗಿ ಸಹಾಯ ಯಾಚಿಸಿ ಪಕ್ಷದ ಕಾರ್ಯಕರ್ತೆಯಾದ ತಾತ್ಕಾಲಿಕ ನೌಕರೆ ಸಿಪಿಎಂ ನೇತಾರನಾದ ರಾಜುವನ್ನು ಸಮೀಪಿಸಿದ್ದ ವೇಳೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ದೂರಲಾಗಿದೆ.