ತಿರುವನಂತಪುರ ನಗರದಲ್ಲಿ 70ಕ್ಕಿಂತ  ಹೆಚ್ಚಿನ ವಯೋಮಿತಿಯವರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಇನ್ನು ಉಚಿತ ಪ್ರಯಾಣ

ತಿರುವನಂತಪುರ: 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ತಿರುವನಂತಪುರ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಣ ಸೌಕರ್ಯ ಏರ್ಪಡಿಸುವ  ಯೋಜನೆಗೆ  ತಿರುವನಂತಪುರ ಕಾರ್ಪರೇಶನ್ ರೂಪು ನೀಡಿದೆ.

ಕೆಎಸ್‌ಆರ್‌ಟಿಸಿಯ ಸಹಕಾರದೊಂದಿಗೆ ಈ ಯೋಜನೆ ಜ್ಯಾರಿಗೊಳಿಸಲಾಗುವುದು. ಪ್ರಸ್ತುತ ಯೋಜನೆ ಜ್ಯಾರಿಗೊಳಿಸಲು ಅನುಮತಿ ನೀಡುವಂತೆ ತಿರುವನಂತಪುರ ಕಾರ್ಪರೇಶನ್‌ನ ಸಂಬಂಧಪಟ್ಟವರು ರಾಜ್ಯ ಸ್ಥಳೀಯಾಡಳಿತ ಇಲಾಖೆಗೆ ಪತ್ರ ಬರೆದಿದ್ದಾರೆ. ಇದಕ್ಕೆ ಇಲಾಖೆಯ ಅನುಮತಿ ಲಭಿಸಿದಲ್ಲಿ ಡಿಸೆಂಬರ್ ತಿಂಗಳಲ್ಲೇ ಈ ಯೋಜನೆ ಜ್ಯಾರಿಗೊಳಿಸ ಲಾಗುವುದೆಂದು ಕಾರ್ಪರೇಷನ್‌ನ ಸಂಬಂಧಪಟ್ಟವರು ತಿಳಿಸಿದ್ದಾರೆ. ರಾಜ್ಯ ರಾಜಧಾನಿಯನ್ನು ವಯೋಜನ ಸೌಹಾರ್ದವನ್ನಾಗಿಸುವ ಸಲುವಾಗಿ ಈ ಯೋಜನೆ ಜ್ಯಾರಿಗೊಳಿಸಲಾಗುವುದು. ಇದಕ್ಕಾಗಿ 70 ವರ್ಷ ಮೀರಿದವರಿಗೆ ಕಾರ್ಪರೇನ್ ಗುರುತು ಚೀಟಿ ನೀಡಲಿದೆ.

ಆ ಗುರುತು ಚೀಟಿ ಬಳಸಿ ತಿರುವನಂತಪುರ ನಗರದಲ್ಲಿ ಹಿರಿಯ ನಾಗರಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ನಡೆಸಬಹುದು. ಇದರ ಹಣವನ್ನು ಕಾರ್ಪರೇಷನ್ ಕೆಎಸ್‌ಆರ್‌ಟಿಸಿಗೆ ನೀಡಲಿದೆ.

Leave a Reply

Your email address will not be published. Required fields are marked *

You cannot copy content of this page