ಲೀಗ್ ಸದಸ್ಯೆ ರಾಜೀನಾಮೆ ಹಿಂದೆ ಸಿಪಿಎಂ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರ-ಸಿಪಿಎಂ

ಪೈವಳಿಕೆ: ಪೈವಳಿಕೆ ಪಂಚಾಯತ್‌ನ ೨ನೇ ವಾರ್ಡ್ ಸದಸ್ಯೆಗೆ ಸಿಪಿಎಂ ಆಮಿಷವೊಡ್ಡಿ ಲೀಗ್ ಸದಸ್ಯೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ  ಹೇಳಿಕೆ ಸತ್ಯಕ್ಕೆ ದೂರ ಎಂದು ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ  ತಿಳಿಸಿದೆ. ಮುಸ್ಲಿಂ ಲೀಗ್ ಇಂತಹ ಆಮಿಷಕ್ಕೆ ಕೈ ಚಾಚುವ ಅಗ್ಗದ ಪಕ್ಷವೇ? ಬಿಜೆಪಿ ಆ ಪಕ್ಷದ ಮೌಲ್ಯಕ್ಕೆ ಅಪಮಾನ ಮಾಡಿದೆ. ಇದಕ್ಕೆ ತಕ್ಕ ಉತ್ತರ ಮುಸ್ಲಿಂ ಲೀಗ್ ಕೊಡಬೇಕಾಗಿದೆ. ಲೀಗ್ ಸದಸ್ಯೆಯ ರಾಜೀನಾಮೆಗೆ ಲೀಗ್ ನಾಯಕತ್ವದ ಭಿನ್ನಾಭಿಪ್ರಾ ಯವೇ ಕಾರಣವೆಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಸಿಪಿಎಂ ಪಕ್ಷ ಲೀಗ್ ಸದಸ್ಯೆಗೆ ಯಾವುದೇ ಆಮಿಷವೊಡ್ಡಿ ಪಿತೂರಿ ನಡೆಸಿಲ್ಲ. ಇಂತಹ ಕೆಲಸಕ್ಕೆ ಪಕ್ಷ ಯಾವತ್ತೂ ಮುಂದಾಗುವುದಿಲ್ಲ. ಇಂತಹ ಕೆಲಸಗಳಲ್ಲಿ ಅತೀ ಹೆಚ್ಚು ಸಾಧನೆಗೈದ ಕೀರ್ತಿ ಬಿಜೆಪಿಗಿದೆ ಎಂದು ಸಿಪಿಎಂ ದೂರಿದೆ. ಕೆಲವು ರಾಜ್ಯಗಳಲ್ಲಿ ಸಂಸದ, ಶಾಸಕರಿಗೆ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೇರಿಸಿದ ಇತಿಹಾಸ ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ಸಿಪಿಎಂ ಪೈವಳಿಕೆ ಲೋಕಲ್ ಕಮಿಟಿ ಪ್ರಕಟಣೆಯಲ್ಲ್ಲಿ ತಿಳಿಸಿದೆ.

RELATED NEWS

You cannot copy contents of this page