ಬಾಡಿಗೆಯ ಮೇಲೆ ಹೊಸತಾಗಿ ಏರ್ಪಡಿಸಿದ ಜಿಎಸ್ಟಿ ಹಿಂತೆಗೆಯಲು ವನಿತಾ ವಿಂಗ್ ಜಿಲ್ಲಾ ಸಮಿತಿ ಆಗ್ರಹ
ಕಾಸರಗೋಡು: ಕೇಂದ್ರ ಸರಕಾರ ಬಾಡಿಗೆಯ ಮೇಲೆ ಹೊಸತಾಗಿ ಏರ್ಪಡಿಸಿದ ಜಿಎಸ್ಟಿ ಹಿಂತೆಗೆಯ ಬೇಕೆಂದು ವನಿತಾವಿಂಗ್ ಕಾಸರ ಗೋಡು ಜಿಲ್ಲಾ ಕೌನ್ಸಿಲ್ ಸಭೆ ಆಗ್ರಹಿಸಿದೆ. ಈ ಬಗ್ಗೆ ನಾಳೆ ನಡೆಯಲಿ ರುವ ರಾಜ್ಭವನ್ ಮಾರ್ಚ್ ಯಶಸ್ವಿಗೊಳಿಸಬೇಕೆಂದು ಸಭೆ ವಿನಂತಿಸಿದೆ. ಜಿಲ್ಲಾ ಅಧ್ಯಕ್ಷೆ ರೇಖಾ ಮೋಹನ್ದಾಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ವನಿತಾವಿಂಗ್ ರಾಜ್ಯ ಅಧ್ಯಕ್ಷೆ ಶ್ರೀಜಾ ಶಿವದಾಸ್ ಉದ್ಘಾಟಿಸಿದರು. ಕೆವಿವಿಇಎಸ್ ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್ ಮುಖ್ಯ ಅತಿಥಿ ಯಾಗಿದ್ದರು. ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಕೆ.ಜೆ. ಸಜಿ ಪ್ರಧಾನ ಭಾಷಣ ಮಾಡಿದರು. ನೂತನ ಅಧ್ಯಕ್ಷೆಯಾಗಿ ರೇಖಾ ಮೋಹನ್ದಾಸ್, ಪ್ರಧಾನ ಕಾರ್ಯದರ್ಶಿಯಾಗಿ ಮಾಯಾ ರಾಮಚಂದ್ರನ್, ಕೋಶಾಧಿಕಾರಿಯಾಗಿ ಜಯಲಕ್ಷ್ಮಿ ಸುನಿಲ್ರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಲೌಲಿ ವರ್ಗೀಸ್, ಕಾರ್ತ್ಯಾಯಿನಿ ಕೆ, ಸರಿಜಾ ಬಾಬು, ಸುಚಿತ್ರ ಪಿಳ್ಳ, ಸಜ್ನ ನಾರಾಯಣನ್, ರಾಧಾ ಸುರೇಂದ್ರನ್, ಲೀಲಾವತಿ, ರತಿ ದೇವಿ, ರೀತ ಪದ್ಮರಾಜ್, ಕಾರ್ಯದರ್ಶಿಗಳಾಗಿ ಲೀಲಾ ತಂಬಾನ್, ಸಿಂಧು ಕೆ, ದೀಪ ಜಯರಾಜ್, ಶ್ರೀಜಾ ಮೋಹನ್, ರಾಜಿ ಸುನಿಲ್, ಗೀತಾ ನಾರಾಯಣನ್, ಜೆಸ್ಸಿಲ, ಸುನಿತ ರಜಿ ಆಯ್ಕೆಯಾದರು. ಸಭೆಯಲ್ಲಿ ಮಾಹಿನ್ ಕೋಳಿಕ್ಕರ, ಎ.ಎ. ಅಸೀಸ್, ಕುಂಞಿರಾಮನ್ ಆಕಾಶ್, ಸರಿಜಾ ಬಾಬು, ಮಾಯಾ ರಾಮಚಂದ್ರನ್, ಜಯಲಕ್ಷ್ಮಿ ಸುನಿಲ್ ಭಾಗವಹಿಸಿದರು.