ಕೊಯಿಪ್ಪಾಡಿ ವಿಲ್ಲೇಜ್‌ನಲ್ಲಿ ತೆರಿಗೆ ಸ್ವೀಕಾರವಿಲ್ಲ : ವಿವಿಧ ಸವಲತ್ತುಗಳಿಂದ ವಂಚಿತರಾದ ಕೃಷಿಕರು
ಕುಂಬಳೆ: ಪಂಚಾಯತ್‌ನ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ತೆರಿಗೆ ಸ್ವೀಕರಿಸದ ಕಾರಣ ಕೃಷಿಕರಿಗೆ ಭಾರೀ ಸಮಸ್ಯೆಯಾಗುತ್ತಿದೆ ಎಂದು ಕೃಷಿಕರು ದೂರಿದ್ದಾರೆ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿಗಾಗಿ ಸೊತ್ತು ದಾಖಲೆ ಸಲ್ಲಿಸಲು ತೀರ್ವೆ ರಶೀದಿ ನೀಡಬೇಕಾಗಿದ್ದು, ಆದರೆ ತೀರ್ವೆ ವಿಲ್ಲೇಜ್ ಕಚೇರಿಯಲ್ಲಿ ಸ್ವೀಕರಿಸದ ಕಾರಣ ರಶೀದಿ ಲಭಿಸದೆ ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ ಕೇಂದ್ರದ ಸಹಾಯವಾದ ೨೦೦೦ ರೂ. ಕಳೆದ ೨೦೨೨ ಮಾರ್ಚ್‌ನಿಂದ ಈ ಪ್ರದೇಶದ ಕೆಲವ ಕೃಷಿಕರಿಗೆ ಲಭಿಸಿಲ್ಲವೆನ್ನಲಾಗಿದೆ. ರೀಸರ್ವೆ ನಡೆಸಲಿರುವ ಕಾರಣ ಸರ್ವೆ ಮುಗಿಯದೆ ತೆರಿಗೆ ಸ್ವೀಕರಿಸುವುದಿಲ್ಲವೆಂಬ ವಿಚಿತ್ರ ನಿಯಮವನ್ನು ಕೊಯಿಪ್ಪಾಡಿ ವಿಲ್ಲೇಜ್ ಕಚೇರಿಯವರು ಪಾಲಿಸುತ್ತಿರುವುದಾಗಿ ಕೃಷಿಕರು ದೂರಿದ್ದಾರೆ. ಆದರೆ ಇದೇ ವೇಳೆ ಎಡನಾಡು ಪುತ್ತಿಗೆ, ಬಂಬ್ರಾಣ ಹಾಗೂ ಇನ್ನು ಕೆಲವು ವಿಲ್ಲೇಜ್ ಕಚೇರಿಗಳಲ್ಲಿ ರೀಸರ್ವೆ ನಡೆಸದಿದ್ದರೂ ತೆರಿಗೆ ಸ್ವೀಕರಿಸುತ್ತಿರುವುದಾಗಿ ಕೃಷಿಕರು ತಿಳಿಸುತ್ತಿದ್ದಾರೆ. ಕಳೆದ ೭ ವಷದ ಹಿಂದೆ ರೀಸರ್ವೆಗಾಗಿ ಅರ್ಜಿ ಸಲ್ಲಿಸಿ ದ್ದರೂ ಇದುವರೆಗೆ ಅದು ಪೂರ್ತಿ ಯಾಗಿಲ್ಲವೆಂದು ಸ್ಥಳೀಯ ಕೃಷಿಕರು ದೂರಿದ್ದಾರೆ. ತೆರಿಗೆ ನೀಡದ ಕಾರಣ ತೀರ್ವೆ ರಶೀದಿ ನೀಡಬೇಕಾದ ಎಲ್ಲಾ ಸವಲತ್ತುಗಳೆಲ್ಲಾ ಕೃಷಿಕರಿಗೆ ತಪ್ಪಿ ಹೋಗುತ್ತಿದೆ ಎಂದು ಕೃಷಿಕರು ದೂರುತ್ತಾರೆ. ಇದಕ್ಕೆ ಸಂಬಂ ಧಪಟ್ಟವರು ಮಧ್ಯೆ ಪ್ರವೇಶಿಸಿ ಶೀಘ್ರ ಪರಿಹಾರ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.