ತಿರೂರು ಡೆಪ್ಯೂಟಿ ತಹಶೀಲ್ದಾರ್ ನಾಪತ್ತೆ: ತನಿಖೆ ಕರ್ನಾಟಕಕ್ಕೆ ವಿಸ್ತರಣೆ

ಮಲಪ್ಪುರಂ: ನಾಪತ್ತೆಯಾದ ಮಲಪ್ಪುರಂ ತಿರೂರ್ ಡೆಪ್ಯೂಟಿ ತಹಶೀಲ್ದಾರರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮೊಬೈಲ್ ಟವರ್ ಲೊಕೇಶನ್ ಕರ್ನಾಟಕದ ಉಡುಪಿಯಲ್ಲಿದೆ ಎಂದು ತಿಳಿದುಕೊಂಡು ತನಿಖೆಯನ್ನು ಕರ್ನಾ ಟಕಕ್ಕೆ ವಿಸ್ತರಿಸಲಾಗಿದೆ. ಮಾಂಙಾಟಿರಿ ನಿವಾಸಿ ಪಿ.ಬಿ. ಚಾಲಿಬಿರವರು ಬುಧವಾರ ಸಂಜೆಯಿಂದ ನಾಪತ್ತೆಯಾಗಿ ದ್ದಾರೆ. ಮನೆಗೆ ತಲುಪಲು ತಡವಾದಿತೆಂದು ಕುಟುಂಬದವರಲ್ಲಿ ತಿಳಿಸಿದ್ದರೆನ್ನಲಾಗಿದೆ. ಬಳಿಕ ಕರೆ ಮಾಡಿದರೂ ಯಾವುದೇ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಕುಟುಂಬ ತಿರೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಲ್ಲಿಕೋಟೆಯಲ್ಲಿ ಕೊನೆಯದಾಗಿ ಮೊಬೈಲ್ ಟವರ್ ಲೊಕೇಶನ್ ತೋರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ೮ ಗಂಟೆಗೆ ಪತ್ನಿಗೆ ಅವರು ಮೆಸೇಜ್ ಕಳುಹಿಸಿದ್ದರು. ಪೊಲೀಸರು ಹಾಗೂ ಅಬಕಾರಿ ದಳದೊಂದಿಗೆ ವಳಾಂಜೇರಿ ಯಲ್ಲಿ ದಾಳಿ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದರು. ಆದರೆ ನೇರವಾಗಿ ದೂರವಾಣಿ ಕರೆ ಮಾಡಿದರೂ ಚಾಲಿಬಿಯವರು ಸ್ವೀಕರಿಸಿರಲಿಲ್ಲ. ಬಳಿಕ ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ. ರಾತ್ರಿ 10 ಗಂಟೆ ವೇಳೆಗೆ ಕುಟುಂಬ ದೂರು ನೀಡಿದ್ದು, ಆ ವೇಳೆಗೆ ಉಡುಪಿ ಯಲ್ಲಿ ಟವರ್ ಲೊಕೇಶನ್ ಕಂಡು ಬಂದಿರುವುದರಿಂದ ಕರ್ನಾಟಕ ಪೊಲೀ ಸರಿಗೆ ಮಾಹಿತಿ ರವಾನಿಸಲಾಗಿದೆ.

RELATED NEWS

You cannot copy contents of this page