ಅಣ್ಣ ತಂಗಿಯರ ಪುತ್ರಿಯರು ನಿಗೂಢವಾಗಿ ನಾಪತ್ತೆ: ತನಿಖೆ ಆರಂಭ
ಕುಂಬಳೆ: ಅಣ್ಣ ತಂಗಿಯರ ಮಕ್ಕ ಳಾದ ೧೫ರ ಹರೆಯದ ಹಾಗೂ ೨೨ರ ಹರೆಯದ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಕುಂಬಳೆ ಹಾಗೂ ಮಂಜೇಶ್ವರ ಪೊಲೀಸರು ಎರಡು ಪ್ರಕರಣಗಳನ್ನು ನೋಂದಾಯಿಸಿ ತನಿಖೆ ಆರಂಭಿಸಿದ್ದಾರೆ.
೧೫ರ ಬಾಲಕಿ ವರ್ಕಾಡಿ ನಿವಾಸಿಯಾಗಿದ್ದಾಳೆ. ಕಳೆದ ೨೪ ರಂದು ಈಕೆಯ ಹೆತ್ತವರು ಉಳ್ಳಾಲದಲ್ಲಿ ನಡೆದಿದ್ದ ವಿವಾಹಕ್ಕೆ ತೆರಳಿದ್ದರು. ಇಬ್ಬರು ಹೆಣ್ಮಕ್ಕಳ ಸಹಿತ ನಾಲ್ಕು ಮಕ್ಕಳನ್ನು ಮನೆಯಲ್ಲಿ ನಿಲ್ಲಿಸಿ ಅವರು ವಿವಾಹಕ್ಕೆ ತೆರಳಿದ್ದರು. ಸಂಜೆ ವೇಳೆ ಹಿಂತಿರುಗುವಾಗ ಮಗಳು ನಾಪತ್ತೆಯಾ ಗಿದ್ದಾಳೆ. ಉಳಿದ ಮಕ್ಕಳಲ್ಲಿ ಪ್ರಶ್ನಿಸಿ ದಾಗ ಬಾಲಕಿ ಮುಟ್ಟಂಗೆ ತೆರಳಿರುವು ದಾಗಿ ತಿಳಿಸಿದ್ದಾರೆ. ಬಾಲಕಿಯ ತಂದೆ ಮುಟ್ಟಂನಲ್ಲಿರುವ ಸಹೋದರಿಯ ಮನೆಗೆ ಕರೆಮಾಡಿ ವಿಚಾರಿಸಿದಾಗ ತನ್ನ ೨೨ರ ಹರೆಯದ ಯುವತಿಯೂ ನಾಪತ್ತೆಯಾಗಿದ್ದಾಳೆಂದು ತಿಳಿಸಿದ್ದಾರೆ. ಈ ಇಬ್ಬರು ಜೊತೆಯಾಗಿ ಎಲ್ಲಾದರೂ ಹೋಗಿರಬಹುದೆಂದು ಶಂಕಿಸಿ ಸಂಬಂಧಿಕರ ಮನೆ ಹಾಗೂ ಇತರೆಡೆಗಳಲ್ಲಿ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಬಳಿಕ ಇಬ್ಬರು ನಾಪತ್ತೆಯಾದ ಬಗ್ಗೆ ಮಂಜೇಶ್ವರ ಹಾಗೂ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಇವರಿಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್‌ಆಗಿರುವುದು ತಿಳಿದುಬಂದಿದೆ. ಇಬ್ಬರ ಪತ್ತೆಗೆ ವಿವಿಧ ಸ್ಥಳಗಲ್ಲಿರುವ ಸಿಸಿ ಟಿವಿ ಕ್ಯಾಮರಾಗಳ ದೃಶಗಳನ್ನು ಪರಿಶೀಲಿಸಲಾಗುತ್ತಿದೆ. ಧಾರ್ಮಿಕ ಚಿಕಿತ್ಸಾ ಕೇಂದ್ರಕ್ಕೆ ತೆರಳಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.