ಭೂಮಿ ಅಳೆದು ಕೊರಗ ಸಮುದಾಯದವರಿಗೆ ದಾಖಲೆ ನೀಡಲು ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಜಿಲ್ಲೆಯಲ್ಲಿ ಕೊರಗ ಸಮುದಾಯದವರು ವಾಸಿಸುವ ಪ್ರದೇಶಗಳ ಭೂಮಿ ಶೀಘ್ರವೇ ಅಳತೆ ಮಾಡಿ ದಾಖಲೆಗಳನ್ನು ನೀಡಲು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಸರ್ವೆ ಅಸಿಸ್ಟೆಂಟ್ ಡೈರೆಕ್ಟರ್‌ರಿಗೆ ನಿರ್ದೇಶ ನೀಡಿದರು. ಈ ಚಟುವಟಿಕೆಗಳಿಗೆ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ, ಕಂದಾಯ, ಸರ್ವೆ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ಸರ್ವೆಯ ಅಂಗವಾಗಿ ಬದಿಯಡ್ಕ ಪಂಚಾಯತ್‌ನ ಪೆರಡಾಲ, ಮಾಡತ್ತಡ್ಕ ಎಂಬೆಡೆಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಜಿಲ್ಲೆಯ ಕಾಸರ ಗೋಡು, ಮಂಜೇಶ್ವರ ತಾಲೂಕುಗಳಲ್ಲಾಗಿ 60ರಷ್ಟು ಪ್ರದೇಶಗಳಲ್ಲಿ ಕೊರಗ ಸಮುದಾಯ ದವರು ವಾಸಿಸುತ್ತಿದ್ದಾರೆ.   ಬದಿಯಡ್ಕ ಪಂ. ಅಧ್ಯಕ್ಷೆ ಎಂ. ಶಾಂತಾ, ತಹಶೀಲ್ದಾರ್ ಸಿ. ಅಜಯನ್, ಎಟಿಡಿಒ ಕೆ.ವಿ. ರಾಘವನ್, ವಿಲ್ಲೇಜ್ ಆಫೀಸರ್‌ಗಳು ಉಪಸ್ಥಿತರಿದ್ದರು.

RELATED NEWS

You cannot copy contents of this page