ಆಯುಷ್ಮಾನ್ ನೋಂದಣಿ ಕಾರ್ಯಕ್ರಮ
ಮಂಜೇಶ್ವರ: 70 ವರ್ಷಕ್ಕಿಂತ ಮೇಲಿನ ಪ್ರಾಯದ ನಾಗರಿಕರಿಗೆ ಕೇಂದ್ರ ಸರಕಾರ ನೀಡುವ ಆಯುಷ್ಮಾನ್ ಯೋ ಜನೆಯ ನೋಂದಣಿ ಕಾರ್ಯಕ್ರಮ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ವತಿಯಿಂದ ಮೊರತ್ತಣೆ ಜನಸೇವಾ ಕೇಂದ್ರದಲ್ಲಿ, ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಯತಿರಾಜ್ ಶೆಟ್ಟಿ, ಯಾದವ ಬಡಾಜೆ, ರವಿರಾಜ್, ಲಕ್ಷ್ಮಣ ಕುಚ್ಚಿಕ್ಕಾಡು, ತುಳಸಿ ಕುಮಾರಿ ನೇತೃತ್ವ ನೀಡಿದರು.