ನೀಲೇಶ್ವರ ಸುಡುಮದ್ದು: ದುರಂತಚಿಕಿತ್ಸೆಯಲ್ಲಿದ್ದ ನಿವೃತ್ತ ಬ್ಯಾಂಕ್ ಮೆನೇಜರ್ ಮೃತ್ಯು: 6ಕ್ಕೇರಿದ ಮಡಿದವರ ಸಂಖ್ಯೆ

ಕಾಸರಗೋಡು: ನೀಲೇಶ್ವರ ತೆರು ಅಞ್ಯೂಟಂಬಲಂ ವೀರರ್‌ಕಾವು  ಕ್ಷೇತ್ರ ದಲ್ಲಿ ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಅಕ್ಟೋಬರ್ 28ರಂದು ತಡರಾತ್ರಿ ಉಂಟಾದ ಭೀಕರ ಸುಡು ಮದ್ದು ದುರಂತದಲ್ಲಿ ಗಂಭೀರ ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದ್ದ ಇನ್ನೋರ್ವ ಸಾವನ್ನಪ್ಪಿದ್ದಾರೆ.

ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮೆನೇಜರ್ ನೀಲೇಶ್ವರ ನೇರ್‌ವಯಲ್ ನಿವಾಸಿ ಪಿ.ಸಿ. ಪದ್ಮನಾಭನ್ (75) ಸಾವನ್ನಪ್ಪಿದ ವ್ಯಕ್ತಿ. ಸುಡುಮದ್ದು ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಕಣ್ಣೂರಿನ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಅಸುನೀಗಿದರು. ಇದರಿಂದ ಈ ದುರಂತ ದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೇ ರಿದೆ. ಮೃತರು ಪತ್ನಿ ಎಂ.ಡಿ. ಭಾರ್ಗವಿ, ಮಕ್ಕಳಾದ ರೋಜನ್ ರಂಜಿತ್ ಬಾಬು, ಶೈನ್‌ಜಿತ್, ಸೊಸೆಯಂದಿರಾದ ವೀಣಾ, ಶ್ರೀಯುಕ್ತ, ಸಹೋದರ ಸಹೋದರಿ ಯರಾದ ಪಿ.ಸಿ. ರಾಜನ್, ಪಿ.ಸಿ. ಭಾನುಮತಿ, ಪಿ.ಸಿ. ರಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸುಡುಮದ್ದು ದುರಂತದಲ್ಲಿ ರಿಕ್ಷಾ ಚಾಲಕ ಕರಿಂದಳ ಕಿಣಾವೂರಿನ ಸಂದೀಪ್ (38), ಕಿಣಾವೂರು ಚೋಯಂಗೋಡಿನ ರತೀಶ್ (48) ಮಂಞಳಂ ಕಾಡ್ ಕೊಲ್ಲಂಬಾರದ ಬಿಜು (36), ನೀಲೇಶ್ವರ ತುರ್ತಿ ಒರ್ಕಳದ ಶಿಬಿನ್‌ರಾಜ್ (19) ಮತ್ತು ಕಿಣಾವೂರ್ ಮುಂಡಾಟ್ಟದ ಕೆ.ವಿ. ರಜಿತ್ ಕುಮಾರ್ (24)  ಎಂಬವರು ಈ ಹಿಂದೆ ಸಾವನ್ನಪ್ಪಿದ್ದರು. ಇದೇ  ಸಂದರ್ಭದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ತಲೆಮರೆಸಿ ಕೊಂಡಿರುವ ಈ ಪ್ರಕರಣದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀ ಸರಿಗೆ ಇನ್ನೂ ಸಾಧ್ಯವಾಗಿಲ್ಲ. ಹೊಸ ದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ಬಳಿಕ ಕಾಸರ ಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ರದ್ದುಪಡಿಸಿತ್ತು. ಮಾತ್ರವಲ್ಲದೆ ಈ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು. ಶ್ರೀ ಕ್ಷೇತ್ರದ ಪದಾಧಿಕಾರಿಗಳಾದ ಚಂದ್ರಶೇಖರನ್ ಮತ್ತು ಭರತನ್ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಗಳಾಗಿದ್ದಾರೆ. ಕೆಳ ನ್ಯಾಯಾಲಯ ಮಂಜೂರು ಮಾಡಿದ ಜಾಮೀನನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅವರು ತನಿಖಾ ತಂಡದ ಮುಂದೆ ಹಾಜರಾಗ ಬೇಕಾಗಿತ್ತು. ಆದರೆ ಅದಕ್ಕೆ ಅವರು ತಯಾರಾಗದೆ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಅವರ ಮನೆಗಳಿಗೆ ಪದೇ ಪದೇ ದಾಳಿ ನಡೆಸಿದರೂ ಅದು ಸಫಲವಾಗಿಲ್ಲ. ಈ ಮಧ್ಯೆ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆಂಬ ಮಾಹಿತಿಯೂ ಇದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page