ಪ್ಲಸ್ ಟು ವಿದ್ಯಾರ್ಥಿನಿ, ಪ್ರಿಯತಮ ಒಂದೇ ಶಾಲ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಜನವಾಸವಿಲ್ಲದ ಮನೆಯೊಳಗೆ ಪ್ಲಸ್‌ಟು ವಿದ್ಯಾ ರ್ಥಿನಿ ಹಾಗೂ ಯುವಕ ಒಂದೇ ಶಾಲ್‌ನಲ್ಲಿ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೆಳ್ಳೆರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ ಪುಲಿಯಂಕುಳಂ ನೆಲ್ಲಿಯರ ಎಂಬಲ್ಲಿ ಈ ಘಟನೆ ನಡೆದಿದೆ. ನೆಲ್ಲಿಯರ ನಿವಾಸಿ ರಾಜೇಶ್ (24) ಹಾಗೂ ಮಾಲೋ ತ್ ಕಸಬ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯೂ, ಎಡತ್ತೋಡ್ ಪಯಾಳದ ಲಾವಣ್ಯ (17) ಎಂಬಿವರು ಸಾವಿಗೀಡಾದವರಾಗಿ ದ್ದಾರೆ. ಈ ಇಬ್ಬರ ಮೃತದೇಹ ನೆಲ್ಲಿ ಯರದ ಜನವಾಸವಿಲ್ಲದ ಮನೆಯೊಳಗೆ ಮೊನ್ನೆ ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ರಾಜೇಶ್ ಹಾಗೂ ಲಾವಣ್ಯ ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟ ಲಾವಣ್ಯ ಸ್ನೇಹಿತೆಯೊಂದಿಗೆ ಪರಪ್ಪಕ್ಕೆ ತಲುಪಿದ್ದಳು. ಪರಪ್ಪದಲ್ಲಿ ನಡೆದ ಕಾರ್ಯಕ್ರಮಕ್ಕೆಂದು ಈಕೆ ತೆರಳಿದ್ದು, ಅಲ್ಲಿಗೆ ರಾಜೇಶ್ ಕೂಡಾ ಬಂದಿದ್ದನೆಂದು ಹೇಳಲಾಗುತ್ತಿದೆ. ಅವರಿಬ್ಬರೂ ಅಲ್ಲಿನ ಕಮ್ಯೂನಿಟಿ ಹಾಲ್ ಸಮೀಪ ನಿಂತು ಮಾತನಾಡಿರುವುದು ಕೂಡಾ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ. ಬಳಿಕ ರಾಜೇಶ್ ಅಲ್ಲಿಂದ ಮರಳಿದ್ದಾನೆ. ಅನಂತರ ಲಾವಣ್ಯ ನೆಲ್ಲಿಯರಕ್ಕೆ ತಲುಪಿದ್ದಳು. ಬಳಿಕ ರಾಜೇಶ್‌ನ ಮನೆಗೆ ಆಕೆ ತಲುಪಿದ್ದು, ಅನಂತರ ಅವರಿಬ್ಬರೂ ಸಮೀಪದ ಹಳೆಯ ಮನೆಯೊಂದಕ್ಕೆ ತೆರಳಿರುವುದನ್ನು ಸ್ಥಳೀಯರು ಕಂಡಿದ್ದಾರೆನ್ನಲಾಗಿದೆ. ಆದರೆ ದೀರ್ಘ ಹೊತ್ತಾದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡಸಿದಾಗ ಮನೆಯೊಳಗೆ ಒಂದೇ ಶಾಲ್‌ನಲ್ಲಿ ಅವರಿಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹಗಳನ್ನು ಪರಿಯಾರಂ ಮೆಡಿಕಲ್ ಆಸ್ಪತ್ರೆಗೆ ಕೊಂಡೊಯ್ದು ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋತ್‌ರ ನೇತೃತ್ವದಲ್ಲಿ ವೆಳ್ಳರಿಕುಂಡ್ ಇನ್ಸ್‌ಪೆಕ್ಟರ್ ಮುಕುಂದನ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.