ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಇಂದು ತೆರೆ: ವೇದಿಕೆ ಮುಂದೆ ಪ್ರೇಕ್ಷಕರ ದಟ್ಟಣೆ

ಪೆರ್ಲ: ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗುತ್ತಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಇಂದು ತೆರೆಬೀಳಲಿದೆ. ಕಳೆದ 18ರಿಂದ ಆರಂಭಗೊಂಡ ವೇದಿಕೆ ಸ್ಪರ್ಧೆಗಳಲ್ಲಿ ಜನರ ಗಮನ ಸೆಳೆಯುವ ನೃತ್ಯ ವಿಭಾಗ ನಿನ್ನೆ ಮೊನ್ನೆಯಾಗಿ ಜರಗಿದ್ದು, ಯಕ್ಷಗಾನ ಸ್ಪರ್ಧೆ ನಿನ್ನೆ ನಡೆದಿದೆ. ಎಲ್ಲಾ ಕಾರ್ಯಕ್ರಮಗಳಿಗೂ ವೇದಿಕೆ ಮುಂದೆ ಪ್ರೇಕ್ಷಕರ ಜಂಗುಳಿ ಕಂಡುಬಂದಿದೆ. ಹಲವು ಪ್ರತಿಭೆಗಳು ತಮ್ಮ ಸಾಮರ್ಥ್ಯದ ಗರಿಷ್ಠ ಪ್ರದರ್ಶನ ನೀಡಿದ್ದು, ಜನರನ್ನು ಸಂತೋಷಗೊಳಿಸಿದೆ.

ಇಂದು ವೇದಿಕೆ ಒಂದರಲ್ಲಿ ಯುಪಿ ಜನರಲ್ ವಿಭಾಗದ  ಒಪ್ಪನ ಸ್ಪರ್ಧೆ, ಬಳಿಕ ಹೈಸ್ಕೂಲ್ ಹೆಣ್ಮಕ್ಕಳ ಒಪ್ಪನ, ಹೈಯರ್ ಸೆಕೆಂಡರಿ ಒಪ್ಪನ ಬಳಿಕ ಹೈಯರ್ ಸೆಕೆಂಡರಿ ಹೆಣ್ಮಕ್ಕಳ ಜನಪದ ನೃತ್ಯ, ಹೈಸ್ಕೂಲ್  ಸಂಘ ನೃತ್ಯ, ಹೈಯರ್ ಸೆಕೆಂಡರಿ ಹೆಣ್ಮಕ್ಕಳ ಗ್ರೂಪ್ ಡ್ಯಾನ್ಸ್ ನಡೆಯಲಿದೆ. ವೇದಿಕೆ ಎರಡರಲ್ಲಿ ಹೈಸ್ಕೂಲ್ ಜನರಲ್ ಗಂಡು ಮಕ್ಕಳ ಕೋಲಾಟ, ಅರಬನ ಮುಟ್ಟು, ದಫ್ ಮುಟ್ಟು, ವಟ್ಟಂಪಾಟ್, ವೇದಿಕೆ ಮೂರರಲ್ಲಿ ವಿವಿಧ ವಿಭಾಗದ ನಾಟಕ, ಇಂಗ್ಲಿಷ್ ಸ್ಕಿಟ್, 4ರಲ್ಲಿ  ಸಂಘಗಾನ, ದೇಶಭಕ್ತಿಗೀತೆ, ೫ರಲ್ಲಿ ಅರಬಿಕ್ ಪದ್ಯ, ಅಭಿನಯಗೀತೆ, ೬ರಲ್ಲಿ ಶಾಸ್ತ್ರೀಯ ಸಂಗೀತ ಮೊದಲಾದ ಸ್ಪರ್ಧೆಗಳು ಇಂದು ನಡೆಯಲಿವೆ.

Leave a Reply

Your email address will not be published. Required fields are marked *

You cannot copy content of this page