ತೀವ್ರ ತಲೆನೋವಿನಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

ಕಾಸರಗೋಡು: ತೀವ್ರ ತ ನೋವಿನಿಂದ ಆಸ್ಪತ್ರೆಯಲ್ಲಿ ದಾಖಲಿ ಸಲ್ಪಟ್ಟ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಪೈಕ ಮಣವಾಟಿ ಮಖಾಂ ಬಳಿಯ ನಿವಾಸಿ ಗಲ್ಫ್ ಉದ್ಯೋಗಿ ಸೈದ್-ಜಮೀಲ ದಂಪತಿಯ ಪುತ್ರಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನಿ ಪಿ.ಎಸ್. ಫಾತಿಮಾ (13) ಸಾವನ್ನ ಪ್ಪಿದ ಬಾಲಕಿ. ಕಳೆದ ಒಂದು ವಾರ ದಿಂದ ಈಕೆ ತೀವ್ರ ತಲೆನೋವಿನಿಂದ ಬಳಲುತ್ತಿದ್ದಳು. ಶುಕ್ರವಾರ ಆಕೆ ಶಾಲೆಗೆ ಹೋಗಿದ್ದಳು. ಶನಿವಾರ ತಲೆನೋವು  ತೀವ್ರಗೊಂಡುದುದರಿಂದ ಮೊದಲು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ   ಫಲಕಾರಿ ಯಾಗದೆ  ಮೃತಪಟ್ಟಳು.ತಾನು ಸದಾ ತಲೆನೋವು ಅನುಭವಿಸುತ್ತಿರುವುದಾಗಿ ಆಕೆ ಪದೇ ಪದೇ ಹೇಳುತ್ತಿದ್ದಳೆಂದು ಅಧ್ಯಾಪಕರು ತಿಳಿಸಿದ್ದಾರೆ. ಬ್ರೈನ್ ಟ್ಯೂಮರ್ ಸಾವಿಗೆ ಕಾರಣವೆಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮೃತಳು ಹೆತ್ತವರ ಹೊರತಾಗಿ ಸಹೋದರ ಜಂಶೀದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ. ಫಾತಿಮಾಳ ನಿಧನಕ್ಕೆ  ಶೋಕ ವ್ಯಕ್ತಪಡಿಸಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಗೆ ಇಂದು ರಜೆ ಸಾರಲಾಗಿದೆ

RELATED NEWS

You cannot copy contents of this page