ಸಾಮಾಜಿಕ ಕಾರ್ಯಕರ್ತ ಎಲ್‌ಐಸಿ ಏಜೆಂಟ್ ನಿಧನ
ಮಾನ್ಯ: ಬದಿಯಡ್ಕ ಪಂಚಾ ಯತ್ ಮಾಜಿ ಉಪಾಧ್ಯಕ್ಷ ಮಾನ್ಯ ಉಳ್ಳೋಡಿಯ ದಿ| ಕೆ. ರವೀಂದ್ರ ಮಾಸ್ತರ್‌ರ ಪುತ್ರ ಸುಬ್ರಹ್ಮಣ್ಯ ಆರ್. (44) ನಿಧನ ಹೊಂದಿದರು. ಮುಂಜಾನೆ ಇವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ. ಮೆದುಳಿನ ಆಘಾತ ಸಂಭವಿಸಿರುವು ದಾಗಿ ತಿಳಿಸಲಾಗಿದೆ. ಸಾಮಾಜಿಕ ಕಾರ್ಯ ಕರ್ತನೂ, ಎಲ್‌ಐಸಿ ಏಜೆಂಟ್ ಕೂಡಾ ಆಗಿದ್ದ ಸುಬ್ರಹ್ಮಣ್ಯರು ಕ್ರೀಡಾರಂಗದಲ್ಲೂ ಸಕ್ರಿಯರಾಗಿದ್ದರು. ಮಾನ್ಯ ಸಾಮ್ರಾಟ್ ಸಂಸ್ಥೆಯ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಟಗಾರನಾಗಿದ್ದರು. ಸಾಮ್ರಾಟ್ ಸಂಸ್ಥೆಯ ಏಳಿಗೆ ಹಾಗೂ ಯಶಸ್ವಿಗಾಗಿ ಅಹೋರಾತ್ರಿ ಶ್ರಮಿಸಿದರು. ಯಕ್ಷಗಾನ ಕಲೆಯ ಅಭಿಮಾನಿಯಾಗಿ ದ್ದರು. ಮಾನ್ಯದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನಗಳ ಯಶಸ್ವಿಗಾಗಿ ದುಡಿದಿದ್ದರು. ಮಾನ್ಯ ಜ್ಞಾನೋದಯ ಶಾಲೆಯ ಶಿಕ್ಷಕ ರಕ್ಷಕ ಸಮಿತಿಯ ಸದಸ್ಯರೂ, ಕಾಸರಗೋಡು ರೈಲ್ವೇ ಪ್ರಯಾಣಿಕರ ಸಂಘದ ಮಾಜಿ ಜತೆ ಕಾರ್ಯದರ್ಶಿಯಾಗಿದ್ದರು. ಮೃತರು ತಾಯಿ ಚಂದ್ರಾವತಿ, ಪುತ್ರ ಚಂದ್ರಮೌಳಿ, ಸಹೋದರ ನಿತ್ಯಾನಂದ ಆರ್. (ಮಾನ್ಯ ಜ್ಞಾನೋದಯ ಶಾಲೆಯ ಆಡಳಿತ ವ್ಯವಸ್ಥಾಪಕ), ಸಹೋದರಿ ಪೂರ್ಣಿಮಾ ನಾರಾಯಣ ಉಡುಪಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಪತ್ನಿ ಚಂದ್ರಮ್ಮ ಈ ಹಿಂದೆಯೇ ನಿಧನರಾಗಿ ದ್ದಾರೆ. ಸುಬ್ರಹ್ಮಣ್ಯರ ನಿಧನಕ್ಕೆ ಇವರು ಸ್ಥಾಪಕ ಸದಸ್ಯರಾಗಿದ್ದ ಸಾಮ್ರಾಟ್ ಮಾನ್ಯ, ಯಕ್ಷಮಿತ್ರ ಮಾನ್ಯ, ಶ್ರೀ ಅಯ್ಯಪ್ಪ ಸೇವಾ ಸಂಘ ಮಾನ್ಯ ಸಂತಾಪ ವ್ಯಕ್ತಪಡಿಸಿದೆ.