ಕೋಟಿ ಪಂಚಾಕ್ಷರಿ ಜಪಯಜ್ಞ ಯಜ್ಞ ಕುಂಡಕ್ಕೆ ಮುಹೂರ್ತ

ಕಾಸರಗೋಡು: ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದ. ೧೬ರಿಂದ ನಡೆಯಲಿರುವ ಕೋಟಿ ಪಂಚಾಕ್ಷರಿ ಜಪಯಜ್ಞದ ಯಜ್ಞ ಕುಂಡಕ್ಕೆ ಇಂದು ಬೆಳಿಗ್ಗೆ ಮುಹೂರ್ತ ನಡೆಯಿತು.  ಈ ವೇಳೆ ಕ್ಷೇತ್ರದ ಟ್ರಸ್ಟಿ ಬೋರ್ಡ್ ಅಧ್ಯಕ್ಷ ನ್ಯಾಯವಾದಿ ಗೋವಿಂದನ್ ನಾಯರ್, ಯಜ್ಞಸಮಿತಿಯ ಕಾರ್ಯಾ ಧ್ಯಕ್ಷರಾದ ಕೆ.ಎನ್. ವೆಂಕಟ್ರಮಣ ಹೊಳ್ಳ, ರಾಮ್ ಪ್ರಸಾದ್, ಉಪಾಧ್ಯಕ್ಷ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಕ್ಷೇತ್ರ ನಿರ್ವಹಣಾಧಿಕಾರಿ ಟಿ. ರಾಜೇಶ್, ಟ್ರಸ್ಟ್ ಸದಸ್ಯೆ ಉಷಾ, ಸಮಿತಿ ಪದಾಧಿಕಾರಿಗಳಾದ ಮೀರಾ ಕಾಮತ್, ಕಿಶೋರ್ ಕುಮಾರ್, ಅಯ್ಯಪ್ಪ ಮುದ್ರಾಧಾರಿಗಳು, ಭಕ್ತರು ಉಪಸ್ಥಿತರಿದ್ದರು.

You cannot copy contents of this page