ಮರ ಕಡಿಯುತ್ತಿದ್ದಾಗ ಮೈಮೇಲೆ ಬಿದ್ದು ಯುವಕ ಮೃತ್ಯು
ಮಂಜೇಶ್ವರ: ಮರ ಕಡಿಯುತ್ತಿದ್ದ ವೇಳೆ ಮರ ಮೈಮೇಲೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ವರ್ಕಾಡಿ ಗಾಂಧಿನಗರ ನಿವಾಸಿ ಟಿಂಬರ್ ಇಬ್ರಾಹಿಂ ಎಂಬವರ ಪುತ್ರ ಕಡಂಬಾರ್‌ನಲ್ಲಿ ವಾಸವಾಗಿರುವ ಬಿ. ಮೊಹಮ್ಮದ್ ಸತ್ತಾರ್ [40] ಮೃತಪಟ್ಟ ದುರ್ದೆÊವಿ ನಿನ್ನೆ ಬೆಳಿಗ್ಗೆ ಕಡಂಬಾರ್ ಸಮೀಪದ ಇಡಿಯದಲ್ಲಿ ಹಿತ್ತಿಲಿನಲ್ಲಿ ಮರ ಕಡಿಯುತ್ತಿದ್ದ ವೇಳೆ ರೆಂಬೆ ಇವರ ಮೈಮೇಲೆ ಬಿದ್ದು ಗಂಭೀರ ಗಾಯಗÉÆಂಡಿದ್ದನ್ನೆಲಾಗಿದೆ. ಕೂಡಲೇ ಇವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತರು ಪತ್ನಿ ಯಾಸ್ಮಿನ್, ಮಕ್ಕಳಾದ ನಿಲಾಫಾತಿಮ್ಮ, ರೈಕ ಮರಿಯಂ, ಮಿಶ್ರಿಯಾ ಮೆರಿಂ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.