17 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಕಾಸರಗೋಡು: ಕೂಡ್ಲು ರಾಮ ದಾಸನಗರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ 17.28 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂ ಬಂಧಿಸಿ ಬೆದ್ರಡ್ಕದ ನರೇಂದ್ರ (49) ಎಂಬಾತನನ್ನು ಬಂಧಿ ಸಲಾಗಿದೆ. ಎಕ್ಸೈಸ್ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಎ.ವಿ. ರಾಜೀವ್‌ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.