ಬಾಂಬು ನಿರ್ಮಾಣ ವೇಳೆ ಸ್ಫೋಟ ಮೂವರು ಸ್ಥಳದಲ್ಲೇ ಸಾವು
ಕೊಲ್ಕತ್ತಾ: ಬಾಂಬ್ ನಿರ್ಮಾಣದ ವೇಳೆ ಸ್ಫೋಟಗೊಂಡು ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಪಶ್ಚಿಮಬಂಗಾಳದ ಮುರ್ಶಿದಾ ಬಾದ್ನ ಸಾಗರ್ಪಾರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಖಯರ್ತಲ ಪ್ರದೇಶದ ಮಾಮುನ್ ಮೊಲ್ಲ ಎಂಬಾತನ ಮನೆಯಲ್ಲಿ ಇಂದು ಮುಂಜಾನೆ ಈ ಸ್ಫೋಟ ಉಂಟಾಗಿದೆ. ಈ ಮನೆಯಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡಿದೆ. ಇದರಲ್ಲಿ ಸಾವನ್ನಪ್ಪಿದವರನ್ನು ಮಾಮುನ್ಮೊಲ್ಲ, ಸಖಿರುಲ್ ಸರ್ಕಾರ್ ಮತ್ತು ಮುಸ್ತ ಕೀನ್ ಶೇಖ್ ಎಂದು ಗುರುತಿಸಲಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಮುಸ್ತಕೀನ್ ಶೇಖ್ ಮಹತಾಬ್ ಕಾಲನಿ ನಿವಾಸಿಯಾಗಿ ದ್ದಾನೆ ಮತ್ತು ಸಖಿರುಲ್ ಸರ್ಕಾರ್ ಖಯರ್ತಲ ಪ್ರದೇವಾಸಿಯಾಗಿದ್ದಾನೆ.
ಮನೆಯಲ್ಲಿ ಇಂದು ಮುಂಜಾನೆ ಕತ್ತಲಲ್ಲೇ ಕುಳಿತು ಈ ಮೂವರು ಅಕ್ರಮವಾಗಿ ಬಾಂಬ್ ತಯಾರಿಸುತ್ತಿದ್ದರೆನ್ನಲಾಗಿದೆ. ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತೆಂದರೆ ಅದರ ಶಬ್ದಕ್ಕೆ ಹೆದರಿ ಆ ಪರಿಸರದ ಜನರು ಮನೆಯಿಂದ ಹೊರಕ್ಕೆ ಓಡಿದ್ದಾರೆ. ಸ್ಫೋಟಗೊಂಡ ಮನೆ ಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾತ್ರವಲ್ಲ ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗಿದೆ.
ಬಾಂಬ್ನ್ನು ಯಾಕೆ ತಯಾರಿಸಲಾಗುತ್ತಿತ್ತು, ಮತ್ತು ಅದನ್ನು ಎಲ್ಲಿ ಸ್ಫೋಟಿಸುವ ಸಂಚು ಹೂಡಲಾಗಿದೆ ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಭಯೋತ್ಪಾದಕರ ನಂಟಿನ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕೇಂದ್ರ ತನಿಖಾ ತಂಡಗಳೂ ಈ ಬಗ್ಗೆ ಸಮಾನಾಂತರ ತನಿಖೆ ಆರಂಭಿಸಿವೆ.