ಕುಖ್ಯಾತ ಕಳವು ಆರೋಪಿ ಕ್ವಾರ್ಟರ್ಸ್ನಿಂದ ಸೆರೆ
ಉಪ್ಪಳ: ಹಲವು ಕಳವು ಪ್ರಕರಣಗಳ ಆರೋಪಿಯನ್ನು ಪೊಲೀಸರು ಕ್ವಾರ್ಟರ್ಸ್ನಿಂದ ಸೆರೆ ಹಿಡಿದಿದ್ದಾರೆ. ಉಪ್ಪಳ ಮುಸ್ತಫ ಮಂಜಿಲ್ನ ಮೀಶ ರೌಫ್ ಯಾನೆ ಅಬ್ದುಲ್ ರೌಫ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನಿರ್ದೇಶ ಪ್ರಕಾರ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ರೂಪೀಕರಿಸಿದ ಸ್ಕ್ವಾಡ್ ಮೊಗ್ರಾಲ್ನ ಕ್ವಾರ್ಟರ್ಸ್ನಿಂದ ಅಬುಲ್ ರೌಫ್ ನನ್ನು ಬಂಧಿಸಿದೆ. ಈತನಿಂದ ಇತ್ತೀಚೆಗೆ ಉಪ್ಪಳದಿಂದ ಕಳವಿಗೀಡಾದ ಬೈಕ್ ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು, ಕುಂಬಳೆ, ವಿದ್ಯಾ ನಗರ, ಮಂಜೇಶ್ವರ ಠಾಣೆಗಳಲ್ಲಾಗಿ ಈತನ ವಿರುದ್ಧ ಹಲವು ಕಳವು ಪ್ರಕರಣಗಳಿವೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ರಾಜ್ಯಗಳಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಮೇಲೆ ಹಲವು ವಾರಂಟ್ಗಳು ಇದ್ದುದರಿಂದ ಈತನ ಮೇಲೆ ಪೊಲೀ ಸರು ನಿಗಾ ಇರಿಸಿದ್ದರು. ಶನಿವಾರ ಬೆಳಿಗ್ಗೆ ರೌಫ್ ಕ್ವಾರ್ಟರ್ಸ್ನಲ್ಲಿದ್ದಾನೆಂದು ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇನ್ಸ್ಪೆಕ್ಟರ್ ಇ. ಅನೂಬ್ ಕುಮಾರ್ರ ನೇತೃತ್ವದಲ್ಲಿ ಕ್ವಾರ್ಟರ್ಸ್ ಸುತ್ತುವರಿದು ಆತನನ್ನು ಸೆರೆ ಹಿಡಿದಿದ್ದಾರೆ. ಸಬ್ ಇನ್ಸ್ಪೆಕ್ಟರ್ಗಳಾದ ರತೀಶ್ ಗೋಪಿ, ಕೆ.ಆರ್. ಉಮೇಶ್, ಸೀನಿಯರ್ ಸಿವಿಲ್ ಪೊಲೀಸ್ ಆಫೀ ಸರ್ ಪ್ರಮೋದ್, ಸಿಪಿಒಗಳಾದ ಅಶ್ವಂತ್ ಕುಮಾರ್, ವಿಜಯನ್, ಪ್ರಣವ್, ಅಬ್ದುಲ್ ಶುಕೂರ್ ಮೊದಲಾದವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.