ಬೇಕೂರು: ಕುಡಿಯುವ ನೀರು ವಿತರಣೆ ಆರಂಭ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ  ಬೇಕೂರು ಹಿರಣ್ಯಪದವಿನಲ್ಲಿರುವ  ಕುಡಿಯುವ ನೀರು ವಿತರಣೆ ಕೇಂದ್ರದಲ್ಲಿ ಹಾನಿಗೀಡಾದ ಮೋಟಾರ್ ಪಂಪ್ ಹಾಗೂ ಕೊಡಂಗೆ ಬಾವಿ ಶೆಡ್ ಬಳಿಯಿರುವ ಟ್ರಾನ್ಸ್ ಫಾರ್ಮರ್ ನ್ನು ದುರಸ್ತಿಗೊಳಿಸಿ ಕುಡಿಯುವ ನೀರು ವಿತರಣೆ ನಿನ್ನೆಯಿಂದ ಆರಂಭಗೊಂಡಿದೆ. ಕಳೆದ ಒಂದು ವಾರದ ಹಿಂದೆ ಮೋಟಾರ್ ಪಂಪ್ ಹಾಗೂ ಟ್ರಾನ್ಸ್ ಫಾರ್ಮರ್ ಹಾನಿಗೊಂಡಿದ್ದು, ಇದರಿಂದ ನೀರು ವಿತರಣೆ ಸಂಪೂರ್ಣ ಮೊಟಕುಗೊಂಡಿತು. ಇದರಿಂದ ಹಲವು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದವು. ಈ ಬಗ್ಗೆ ಕಾರವಲ್ ವರದಿ ಪ್ರಕಟಿಸಿತ್ತು.  ಅಲ್ಲದೆ ಊರವರು ನೀಡಿದ ಮನವಿಯಂತೆ ೭ನೇ ವಾರ್ಡ್ ಪ್ರತಾಪನಗರ ಸದಸ್ಯೆ ಸುಧಾ ಗಣೇಶ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ನೀರು ವಿತರಣೆಗೆ ಕ್ರಮ ಕೈಗೊಳ್ಳಲು  ಒತ್ತಾಯಿಸಿದ್ದರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುತುವರ್ಜಿ ವಹಿಸಿ ಹಾನಿಗೀಡಾದ ಪಂಪ್ ಹಾಗೂ ಟ್ರಾನ್‌ಫಾರ್ಮರ್‌ನ್ನು ದುರಸ್ತಿಗೊಳಿಸಿ ನೀರು ವಿತರಣೆಗೆ ಕ್ರಮ ಕೈಗೊಂಡಿದ್ದಾರೆ.

RELATED NEWS

You cannot copy contents of this page