ತಲೆಮರೆಸಿಕೊಂಡಿದ್ದ ಅಬಕಾರಿ ಪ್ರಕರಣಗಳ ಆರೋಪಿ ಸೆರೆ

ಕಾಸರಗೋಡು: ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿ ಯಾಗಿದ್ದು, ಬಳಿಕ ತಲೆಮರೆಸಿಕೊಂಡು ಜೀವಿಸುತ್ತಿದ್ದ ಆರೋಪಿಯನ್ನು ಕಾಸರಗೋಡು ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ಬಂಧಿಸಿದೆ. ಕಳನಾಡು ನಿವಾಸಿ ರೋಸ್‌ಚಂದ್ರ (40) ಬಂಧಿ ತ ಆರೋಪಿ. ಈತ ಚಲಾಯಿಸುತ್ತಿದ್ದ ವಾಹನವನ್ನು ಅಬಕಾರಿ ತಂಡ ಇತ್ತೀಚೆಗೆ ತಪಾಸಣೆಗೊಳಪಡಿಸಿದಾಗ ಅದರಲ್ಲಿ 23 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿತ್ತು. ಆ ವೇಳೆ ಆತ ತಪ್ಪಿಸಿಕೊಂಡಿದ್ದನೆಂದೂ ಮಾತ್ರವಲ್ಲ ಇತರ ಹಲವು ಅಬಕಾರಿ ಪ್ರಕರಣ ಗಳಲ್ಲೂ ಈತ ಆರೋಪಿಯಾ ಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನ ಬಗ್ಗೆ ಕಾಸರ ಗೋಡು ಎಕ್ಸೈಸ್ ಇಂಟಲಿಜೆನ್ಸ್ ಆಂಡ್ ಇನ್‌ವೆ ಸ್ಟಿಗೇಶನ್ ಬ್ಯೂರೋ ದ ಪ್ರಿವೆಂಟೀವ್ ಆಫೀಸರ್ ಇ.ಕೆ. ಬಿಜೋಯ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಅವರು ನೀಡಿದ ಮಾಹಿತಿಯಂತೆ ಆರೋಪಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿ ಗಳು ತಿಳಿಸಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page