ಮುಖ್ಯಮಂತ್ರಿ ನಾಳೆ ಜಿಲ್ಲೆಗೆ
ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಳೆ ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವರು.
ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ವಿದ್ಯಾನಗರ ಉದಯ ಗಿರಿಯ 27.51 ಸೆಂಟ್ಸ್ ಸ್ಥಳದಲ್ಲಿ 2.24 ಕೋಟಿ ರೂ. ವ್ಯಯಿಸಿ ನಿರ್ಮಿಸಿರುವ ಕಟ್ಟಡವನ್ನು ನಾಳೆ ಬೆಳಿಗ್ಗೆ ೯.೩೦ಕ್ಕೆ ಮುಖ್ಯಮಂತ್ರಿ ಉದ್ಘಾಟಿಸುವರು. ರಾಜ್ಯ ಶಿಕ್ಷಣ ಖಾತೆ ಸಚಿವ ಡಾ.ಆರ್. ಬಿಂದು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು ಸೇರಿದಂತೆ ಹಲವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಇದರ ಹೊರತಾಗಿ ಬೇಕಲ ಕೋಟೆ ಬಳಿ ಟಾಟಾ ಗ್ರೂಪ್ ನೂತನವಾಗಿ ನಿರ್ಮಿಸಿರುವ ರೆಸೋರ್ಟ್‌ನ್ನು ಮುಖ್ಯಮಂತ್ರಿ ಉದ್ಘಾಟಿಸುವರು. ಮಾತ್ರವಲ್ಲ ಚೀಮೇನಿಯಲ್ಲಿ ನಡೆಯುವ ಸಿಪಿಎಂ ಕಾರ್ಯಕ್ರಮದಲ್ಲೂ ಭಾಗವಹಿಸುವರು.