ಯುವತಿ ನಾಪತ್ತೆ
ಮುಳ್ಳೇರಿಯ: ಕಾರಡ್ಕ ಮೂಡಾಂಕುಳದ ಶಿಜು ಕುಮಾರ್ ಎಂಬವರ ಪತ್ನಿ ರಜಿತ (22) ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಪತಿ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರಜಿತ ಮುಳ್ಳೇರಿಯದ ವ್ಯಾಪಾರ ಸಂಸ್ಥೆಯೊಂದರಲ್ಲಿ ನೌಕರೆಯಾಗಿದ್ದಳ. ನಿನ್ನೆ ಮಧ್ಯಾಹ್ನ ಅಂಗಡಿಯಿಂದ ಬೇಡಗಂ ಚೆಂಬಕ್ಕಾಡ್ನ ಸ್ವಂತ ಮನೆಗೆಂದು ತಿಳಿಸಿ ತೆರಳಿದ್ದಳು. ಆದರೆ ಅನಂತರ ಮರಳಿ ಬಂದಿಲ್ಲವೆಂದು ಶಿಜು ಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.