ತುರ್ತು ಜಾಗ್ರತೆ ಅನಿವಾರ್ಯವಾದ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಂಘ
ಕುಂಬಳೆ: ಸಹಕಾರಿ ಇಲಾಖೆಯ ನೌಕರರಿಗೆ ಕಳೆದ ಮಾರ್ಚ್ 16ರಂದು ಡಿ.ಎ ಹೆಚ್ಚಿಸಿ ಸರಕಾರ ಆದೇಶ ಹೊರ ಡಿಸಿತ್ತು. ಈ ಆದೇಶದ ಆಧಾರದಲ್ಲಿ ಆಡಳಿತ ಸಮಿತಿಯ ಅನುಮತಿಯಿಲ್ಲದೆ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಂಘದ ನೌಕರರು 2021 ಜನವರಿಯಿಂದ 2023 ಮಾರ್ಚ್ವರೆಗಿನ ಬಾಕಿ ಮೊತ್ತವನ್ನು ಸಂಘದ ಫಂಡ್ನಿAದ ಪಡೆದುಕೊಂಡಿದ್ದಾರೆ. ಆಡಳಿತ ಸಮಿತಿಯ ಎಲ್ಲಾ ರೀತಿಯ ಕಾಯ್ದೆ ಗಳನ್ನು ಉಲ್ಲಂಘಿಸಿ ಅವರು ಹೇಳು ವುದನ್ನು ಅನುಸರಿಸಿಕೊಂಡಿರುತ್ತಿದ್ದ ನೌಕರರು ಅವರ ಸಮಸ್ಯೆಗಳನ್ನು ನೇರವಾಗಿ ಅರಿತುಕೊಂಡಿಲ್ಲವೆನ್ನಲಾಗಿದೆ. ಸಂಘದ ಹಣವನ್ನು ಈ ರೀತಿಯಲ್ಲಿ ಖರ್ಚು ಮಾಡುವುದರ ಕುರಿತು ಆಡಳಿತ ಸಮಿತಿ ಮೌನ ವಹಿಸಿತ್ತು. ಸಂಘ ಕಾರ್ಯಾಚರಿಸುತ್ತಿದ್ದ ಕಟ್ಟಡದ ಬಾಡಿಗೆಗೆ ಯಾವುದೇ ಒಪ್ಪಂದವಿಲ್ಲ. ಮಾತ್ರವಲ್ಲ ಹೊಸ ಕಟ್ಟಡಕ್ಕೆ ಕಚೇರಿ ಯನ್ನು ಸ್ಥಳಾಂತರಿಸಲು ತೀರ್ಮಾನಿಸಿದ 2023 ಡಿಸೆಂಬನಿAðದ ಆ ಕಚೇರಿಗೂ ಬಾಡಿಗೆ ನೀಡಲಾಗುತ್ತಿದೆ. ಸಂಘ ಒಂದು ಕಟ್ಟಡದಲ್ಲಿ ಕಾರ್ಯಾಚರಿಸುತ್ತಾ ಎರಡು ಕಟ್ಟಡಗಳಿಗೆ ಬಾಡಿಗೆಯನ್ನು ನೀಡುತ್ತಿದೆ. ಹತ್ತು ತಿಂಗಳಿAದ ಈ ರೀತಿಯಲ್ಲಿ ಎರಡು ಬಾಡಿಗೆ ನೀಡಲಾಗುತ್ತಿದೆ.
ಆಡಳಿತ ಸಮಿತಿ ಅಧ್ಯಕ್ಷರನ್ನು ಸಹಕಾರಿ ಇಲಾಖೆ ಅನರ್ಹಗೊಳಿಸಿದ ಬಳಿಕ ಅಧಿಕಾರ ವಹಿಸಿಕೊಂಡ ಅಡ್ಮಿನಿ ಸ್ಟ್ರೇಟರ್ ಸಂಘ ಕಾರ್ಯಾಚರಿಸದ ಕಟ್ಟಡಕ್ಕೂ ನೀಡುತ್ತಿದ್ದ ಬಾಡಿಗೆಯನ್ನು ನಿಲುಗಡೆಗೊಳಿಸಿದ್ದಾರೆ. ಸಂಘದ ಸದಸ್ಯರ ಕ್ಷೇಮಕ್ಕಾಗಿ ಸಂಘದ ಆದಾಯದಿಂದ ನಿಗದಿತ ಮೊತ್ತವನ್ನು ಮೀಸಲಿಡ ಲಾಗುತ್ತಿದೆ. ಈ ರೀತಿಯಲ್ಲಿ ಮೀಸಲಿಡುವ ಹಣವನ್ನು ಸಂಘದ ಸದಸ್ಯನಾಗಿರುವಾಗ ಮೃತಪಡುವವರಿಗೆ ಸಾಲ ಪಾವತಿಸಲು ಬಾಕಿ ಇದ್ದಲ್ಲಿ ಅದನ್ನು ಮರು ಪಾವತಿಸಲು ಉಪಯೋಗಿಸಬೇಕಾಗಿದೆ ಎಂದು ಆಡಳಿತ ಸಮಿತಿಯಲ್ಲಿ ವ್ಯವಸ್ಥೆಯಿದೆ. ಆ ವ್ಯವಸ್ಥೆ ಜ್ಯಾರಿಯಲ್ಲಿರುವಾಗಲೇ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಓರ್ವ ಸದಸ್ಯನಿಗೆ ಈ ಫಂಡ್ನಿAದ 50,000 ರೂಪಾಯಿ ಚಿಕಿತ್ಸೆಗಾಗಿ ನೀಡಲಾ ಯಿತು. ಸಂಘದ ಜಾಹೀರಾತಿಗಾಗಿ 1,93,000 ರೂಪಾಯಿ ಖರ್ಚು ಮಾಡಲಾಯಿತೆಂದು ಸಂಘದ ಲೆಕ್ಕಪುಸ್ತಕದಲ್ಲಿ ಬರೆದಿಡಲಾಗಿದೆ. ಈ ಮೊತ್ತವನ್ನು ಕೂಡಲೇ ಮರುಪಾವತಿಸ ಬೇಕೆಂದು ಆಡಿಟಿಂಗ್ ವಿಭಾಗ ನಿರ್ದೇಶಿಸಿದೆ. ಕಾನೂನು ವಿರುದ್ಧವಾಗಿ ಖರ್ಚು ಮಾಡಿದ ಸಂಘದ ಹಣವನ್ನು ಮರಳಿ ವಸೂಲು ಮಾಡಲು ಹಾಗೂ ಈ ರೀತಿಯಲ್ಲಿ ಹೆಚ್ಚುವರಿಯಾಗಿ ನೀಡಿದ ಹಣವನ್ನು ಮರು ಪಾವತಿಸಲು ಆಡಿಟ್ ವಿಭಾಗ ನಿರ್ದೇಶಿಸಿದೆ. ಸಂಘ 4,04,92,550 ರೂಪಾಯಿ ಸಾಲ ನೀಡಿದೆ. 56,01,473 ರೂಪಾಯಿ ಸಾಲ ತೆಗೆದವರಿಂದ ಬಡ್ಡಿ ಲಭಿಸದೆ ಅದು ಬಾಕಿ ಉಳಿದಿದೆ. ಇದರ ಹೊರತು 4,99,315 ರೂಪಾಯಿ ಬಡ್ಡಿ ರೂಪದಲ್ಲಿ ಸಿಗಲು ಬಾಕಿ ಇದೆ. 5,69,24,627 ರೂಪಾಯಿಗಳ ವ್ಯವಹಾರ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಲ್ಲಿ ನಡೆದಿದೆ. ಆದರೆ ಹತ್ತು ವರ್ಷದೊಳಗೆ ಶೇರ್ ಬಂಡವಾಳ 28 ಶೇಕಡವೇ ಹೆಚ್ಚಿದೆ.
2014-15ರಲ್ಲಿ ಬ್ಯಾಂಕ್ನಲ್ಲಿ 654 ಮಂದಿ ಸದಸ್ಯರಿದ್ದರು. 2023-24ರಲ್ಲಿ ಅದು 1321 ಆಗಿ ಹೆಚ್ಚಿತು. ಸದಸ್ಯರ ಸಂಖ್ಯೆ ಇಮ್ಮಡಿಗಿಂತಲೂ ಹೆಚ್ಚಾದಾಗ ಶೇರ್ ಬಂಡವಾಳ 2014-15ರಲ್ಲಿದ್ದ 14.73 ಲಕ್ಷದಿಂದ ಹತ್ತು ವರ್ಷದಲ್ಲಿ 18.90 ಲಕ್ಷವಾಗಿ ಹೆಚ್ಚಿಸಲು ಮಾತ್ರವೇ ಸಾಧ್ಯವಾಗಿದೆ. ಇದೇ ವೇಳೆ 2014-15ರಲ್ಲಿ ಸಾಲ 198.55 ಲಕ್ಷವಾಗಿದ್ದುದು 2023-24ರಲ್ಲಿ 404.92 ಲಕ್ಷವಾಗಿ ಹೆಚ್ಚಿದೆ. 2024ರಲ್ಲಿ 421.31 ಲಕ್ಷ ರೂಪಾಯಿ ಠೇವಣಿ ಇತ್ತು. 2014-15ರಲ್ಲಿ 3.52 ಶೇಕಡಾ ಬಾಕಿ ಇತ್ತು. ಇದೇ ವೇಳೆ 2023-24ರಲ್ಲಿ ಬಾಕಿ 29 ಶೇಕಡಾ ವಾಗಿತ್ತು. 2023-24ರಲ್ಲಿ 23.30 ಶೇಕಡವಾಗಿತ್ತು ಸಂಘದ ನಷ್ಟ. ಈ ವರ್ಷ 56,01,473 ರೂಪಾಯಿ ಲಭಿಸಬೇಕಾಗಿದ್ದ ಬಡ್ಡಿ ಹಾಗೇ ಉಳಿದು ಕೊಂಡಿದೆ. ಇಷ್ಟು ರೂಪಾಯಿಗಳ ವ್ಯವಹಾರ ನಡೆಯುವ ಈ ಸಂಘದಲ್ಲಿ ಸೆಕ್ರೆಟರಿಯ ಹುದ್ದೆ ಅಸ್ತಿತ್ವದಲ್ಲಿರುವಾಗಲೇ ಆ ಹುದ್ದೆಗೆ ಓರ್ವ ಖಾಯಂ ನೌಕರನನ್ನು ಇದುವರೆಗೆ ನೇಮಿಸಿಲ್ಲ ಎಂಬುದು ವಿಚಿತ್ರ ಸಂಗತಿಯಾಗಿದೆ. ಓರ್ವ ಜ್ಯೂನಿಯರ್ ಕ್ಲರ್ಕ್ಗೆ ಅಂದಿನಿAದ ಇಂದಿನವರೆಗೆ ಸೆಕ್ರೆಟರಿಯ ಹೊಣೆಗಾರಿಕೆಯನ್ನು ಆಡಳಿತ ಸಮಿತಿ ವಹಿಸಿಕೊಟ್ಟಿರುತ್ತದೆ.