ಹೊಸ ವಿದ್ಯುತ್ ಸಂಪರ್ಕ: ಈಗಿನ ದರ ಮಾ.31ರ ತನಕ ಮುಂದುವರಿಕೆ
ಕಾಸರಗೋಡು: ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲು ಏರ್ಪಡಿ ಸಲಾಗಿರುವ ಈಗಿನ ದರವನ್ನು ಮಾರ್ಚ್ 31೧ರ ತನಕ ವಿಸ್ತರಿಸಲು ವಿದ್ಯುನ್ಮಂಡಳಿ ಮುಂದಾಗಿದೆ. ಹೊಸ ವಿದ್ಯುತ್ ಸಂಪರ್ಕ ದರವನ್ನು ಕಳೆದ ಫೆಬ್ರವರಿಯಲ್ಲಿ ಶೇ. 10ರಷ್ಟು ಹೆಚ್ಚಿಸಲಾಗಿತ್ತು. ಆ ದರ ರೀತಿಯನ್ನು ಮುಂದಿನ ವರ್ಷ ಮಾರ್ಚ್ ೩೧ರ ತನಕ ವಿಸ್ತರಿಸುವ ತೀರ್ಮಾನಕ್ಕೆ ಮಂ ಡಳಿ ಬಂದಿದೆ. ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಇದಕ್ಕೆ ಅನುಮತಿ ನೀಡಿದೆ.
ಮಾರ್ಚ್ 31ರ ನಂತರ ಹೊಸ ವಿದ್ಯುತ್ ಸಂಪರ್ಕಕ್ಕಾಗಿರುವ ದರ ಹೆಚ್ಚಿಸುವ ಸಾಧ್ಯತೆ ಇದೆ. ಹೊಸ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಕಂಬ ಸ್ಥಾಪಿಸುವಿಕೆ, ತಂತಿ ಎಳೆಯುವಿಕೆ, ಮೀಟರ್ ಅಳವಡಿಕೆ, ಟ್ರಾನ್ಸ್‌ಫಾರ್ಮರ್ ಸ್ಥಾಪಿಸುವಿಕೆ ಇತ್ಯಾದಿಗಳಿಗೆ ಈಗಿರುವ ಶುಲ್ಕ ದರ ಮಾರ್ಚ್ ೩೧ರ ತನಕ ಅದೇ ರೀತಿಯಲ್ಲಿ ಮುಂದುವರಿಯಲಿದೆ.