ಕಾಂತಗ ಜನಪದ ವಾದ್ಯ ತಯಾರಕ ಚೋಮ ಕಾಟುಕುಕ್ಕೆ ನಿಧನ
ಪೆರ್ಲ: ಕಾಟುಕುಕ್ಕೆ ನಿವಾಸಿ ಚೋಮ (90) ನಿಧನ ಹೊಂದಿದರು. ಪ್ರಾಚೀನ ಜನಪದ ವಾದ್ಯವಾದ ಕಾಂತಗ ಎಂಬ ವಿಶಿಷ್ಟ ವಾದ್ಯೋಪಕರಣ ತಯಾರಿಸಿ ನುಡಿಸುವ ಹವ್ಯಾಸ ಹೊಂದಿದ್ದರು. ಕೇರೆ ಹಾವಿನ ಬೆನ್ನೆಲುಬು ಹಾಗೂ ಚರ್ಮದ ಮೂಲಕ ಕಾಂತಗ ಎಂಬ ವಾದ್ಯೋಪಕರಣವನ್ನು ಇವರು ತಯಾರಿಸುತ್ತಿದ್ದರು. ಇವರ ಈ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಅಂಬೇಡ್ಕರ್ ವಿಚಾರ ವೇದಿಕೆ, ಮೊಗೇರ ಸಂಘ, ಸರ್ವೀಸ್ ಸೊಸೈಟಿ ಸಹಿತ ವಿವಿಧ ಸಂಘಸಂಸ್ಥೆಗಳು ಸನ್ಮಾನಿಸಿತ್ತು. ಮೃತರು ಪತ್ನಿ ಕಮಲ, ಮಕ್ಕಳಾದ ಶ್ರೀಧರ, ಬಾಬು, ಲಲಿತ, ಜಯಂತಿ, ಉಮೇಶ, ರವಿ, ಸುಮತಿ, ಸುನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.