ಮಲತಾಯಿಯಿಂದ 6 ವರ್ಷದ ಬಾಲಕಿಯ ಕೊಲೆ : ಗರ್ಭಿಣಿಯಾದ ಆರೋಪಿ ಇಂದು ನ್ಯಾಯಾಲಯಕ್ಕೆ
ಕೊಚ್ಚಿ: ಎರ್ನಾಕುಳಂ ನೆಲ್ಲಿಕುಳಿ ೬ ವರ್ಷ ಪ್ರಾಯದ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವುದು ಮಲತಾಯಿ ಎಂದು ದೃಢಗೊಂಡಿದೆ. ಈಕೆಯನ್ನು ಕೊಲೆಗೈದಿರುವುದು ತನಗೆ ಜನಿಸಲಿರುವ ಮಗು ಹಾಗೂ ತನ್ನ ಮುಂದಿನ ಬದುಕಿಗೆ ತಡೆಯಾಗಬಹು ದೆಂಬ ಆತಂಕದಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಪ್ರದೇಶ ನಿವಾಸಿ ಯಾದ ಅಸಸ್‌ಖಾನ್‌ರ ಎರಡನೇ ಪತ್ನಿ ಹಾಗೂ ಗರ್ಭಿಣಿಯಾದ ನಿಶಾ ಆರೋಪಿಯಾಗಿದ್ದಾಳೆ. ತನಗೆ ಮಗು ಜನಿಸುವಾಗ ಮೊದಲ ಪತ್ನಿಯ ಪುತ್ರಿ ಮುಸ್ಕಾನ್ ತಮ್ಮ ಬದುಕಿಗೆ ಕಂಠಕವಾಗಬಹುದೆಂಬ ಚಿಂತನೆಯಲ್ಲಿ ಕೊಲೆ ನಡೆಸಿರುವುದಾಗಿ ಹೇಳಲಾಗಿದೆ. ನಿಶಾಳದ್ದು ಕೂಡಾ ಇದು ಎರಡನೇ ವಿವಾಹವಾಗಿದೆ. ಮೊದಲ ವಿವಾಹದಲ್ಲಿ ಒಂದು ಮಗುವಿದೆ. ಈ ಮೊದಲು ಕೊಲೆ ಕೃತ್ಯದಲ್ಲಿ ಅಜಾಸ್ ಶಾಮೀಲಾಗಿದ್ದಾನೋ ಎಂಬ ಬಗ್ಗೆ ಪೊಲೀಸರು ಶಂಕೆ ಹೊಂದಿದ್ದರು. ಆದರೆ ಆ ಬಳಿಕ ಆತ ಇದರಲ್ಲಿ ಭಾಗಿಯಾಗಿಲ್ಲವೆಂದು ಪೊಲೀಸರು ಪತ್ತೆಹಚ್ಚಿದರು. ವಿಚಾರಣೆ ವೇಳೆ ನಿಶಾ ತಪ್ಪೊಪ್ಪಿಗೆ ನಡೆಸಿದ್ದಾಳೆ.
ಇಂದು ಈಕೆಯನ್ನು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗುವುದು. ನಿನ್ನೆ ಘಟನೆ ನಡೆದಿದೆ. ನೆಲ್ಲಿಕುಳಿ ಇರುಮಲಪ್ಪಡಿ ಸಮೀಪ ಅಜಾಸ್‌ಖಾನ್ ಹಾಗೂ ಕುಟುಂಬ ಬಾಡಿಗೆಗೆ ವಾಸಿಸುತ್ತಿದ್ದ ಅಜಾಸ್‌ಖಾನ್ ನಿನ್ನೆ ಬೆಳಿಗ್ಗೆ ಮುಸ್ಕಾನ್ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದ ಮಗು ಬೆಳಿಗ್ಗೆ ಕರೆದಾಗ ಏಳಲಿಲ್ಲವೆಂದು ಇವರು ಪೊಲೀಸರಲ್ಲಿ ತಿಳಿಸಿದ್ದರು. ಬಳಿಕ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇದು ಕೊಲೆ ಎಂದು ಸಾಬೀತುಗೊಂಡಿತ್ತು.