ರಾಷ್ಟ್ರೀಯ ಹೆದ್ದಾರಿ: ಕೇರಳದಲ್ಲಿ 40 ಯೋಜನೆಗಳು 2025 ಮಾರ್ಚ್ ಮೊದಲು ಪೂರ್ಣ-ಸಚಿವ
ಹೊಸದಿಲ್ಲಿ: ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ 40 ಯೋಜನೆಗಳು 2025 ಮಾರ್ಚ್‌ನೊಳಗೆ ಪೂರ್ತಿ ಗೊಳಿಸಲಾಗುವುದೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
109.51 ಕಿಲೋ ಮೀಟರ್ ರಸ್ತೆ ನಿರ್ಮಿಸುವ ಯೋಜನೆಗಳಿಗಾಗಿ 64,587.09 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. 12 ಯೋಜನೆಗಳಲ್ಲಾಗಿ 269.32 ಕಿಲೋ ಮೀಟರ್ ರಸ್ತೆ ನಿರ್ಮಾಣ ಪೂರ್ಣ ಗೊಂಡಿದೆ. ಉಳಿದ 28 ಯೋಜನೆಗಳ ಲ್ಲಾಗಿ 821.19 ಕಿಲೋ ಮೀಟರ್ ರಸ್ತ್ತೆ ನಿರ್ಮಾಣ ನಡೆಯುತ್ತಿದೆಯೆಂದು ಸಚಿವ ರಾಜ್ಯ ಸಭಯಲ್ಲಿ ತಿಳಿಸಿದ್ದಾರೆ.
ಪೋಕ್ಸೋ ಆರೋಪಿ ಠಾಣೆಯಿಂದ ಪರಾರಿ
ಕೊಚ್ಚಿ: ಪ್ರಾಯಪೂರ್ತಿ ಯಾಗದ ಬಾಲಕಿಗೆ ದೌರ್ಜನ್ಯಗೈದ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಆರೋಪಿ ಪರಾರಿಯಾಗಿದ್ದಾನೆ. ಎರ್ನಾಕುಳಂ ಮುಕ್ಕನ್ನೂರು ನಿವಾಸಿ ಐಸಾಕ್ ಬೆನ್ನಿ ಆಲುವಾ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಪೋಕ್ಸೋ ಪ್ರಕರಣದಲ್ಲಿ ಈತನನ್ನು ಕಸ್ಟಡಿಗೆ ತೆಗೆದು ಠಾಣೆಯಲ್ಲಿರಿಸಲಾಗಿತ್ತು.