ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಮಾಜಿ ಪೋಪ್ಯುಲರ್ ಫ್ರಂಟ್ ನೇತಾರ ಬಂಧನ
ಪುತ್ತೂರು: ಯುವಮೋರ್ಛಾ ನೇತಾರ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ಕಡಿದು ಕೊಲೆಗೈದ ಪ್ರಕರಣದ ಮುಖ್ಯ ಆರೋಪಿಗಳಲ್ಲೋರ್ವನನ್ನು ಇದೀಗ ಸೆರೆಹಿಡಿಯಲಾಗಿದೆ. ಬಂಟ್ವಾಳ ಕೊಡಾಜೆ ಎಂಬಲ್ಲಿನ ಮುಹಮ್ಮದ್ ಶರೀಫ್ (53) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆ ಕೃತ್ಯದ ಬಳಿಕ ವಿದೇಶಕ್ಕೆ ಪರಾರಿಯಾದ ಆರೋಪಿ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿ ತಲುಪಿದಾಗ ಎನ್‌ಐಎ ಬಂಧಿಸಿದೆ.
ಪೋಪ್ಯುಲರ್ ಫ್ರಂಟ್‌ನ ಮಾಜಿ ರಾಜ್ಯ ಕಾರ್ಯಕಾರಿ ಸದಸ್ಯನಾಗಿದ್ದ ಮೊಹಮ್ಮದ್ ಶರೀಫ್ ಪ್ರಕರಣದಲ್ಲಿ ೬ನೇ ಆರೋಪಿಯಾಗಿದ್ದಾನೆ. ಕೊಲೆಕೃತ್ಯದ ಬಳಿಕ ತನಿಖೆ ತೀವ್ರಗೊಂಡಾಗ ಗಲ್ಫ್‌ಗೆ ಪರಾರಿಯಾದ ಈತನಿಗಾಗಿ ಲುಕೌಟ್ ನೋಟೀಸ್ ಹೊರಡಿಸಲಾಗಿತ್ತು. ಈತನನ್ನು ಪತ್ತೆಹಚ್ಚಲು ಸಹಾಯವೊದಗಿ ಸುವವರಿಗೆ 5ಲಕ್ಷ ರೂಪಾಯಿ ಪಾರಿತೋಷಕ ನೀಡುವುದಾಗಿಯೂ ಎನ್‌ಐಎ ಘೋಷಿಸಿತ್ತು.
2022 ಜುಲೈ 26ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರನ್ನು ಬೈಕ್‌ಗಳಲ್ಲಿ ತಲುಪಿದ ತಂಡ ಕಡಿದು ಕೊಲೆಗೈದಿತ್ತು. ಭಾರೀ ಕೋಲಾಹಲಕ್ಕೆ ಕಾರಣವಾದ ಈ ಕೊಲೆ ಪ್ರಕರಣದ ತನಿಖೆಯನ್ನು ೨೦೨೨ ಅಗೋಸ್ತ್ ತಿಂಗಳಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು ೨೩ ಆರೋಪಿ ಗಳಿದ್ದಾರೆ. ಮೊಹಮ್ಮದ್ ಶರೀಫ್‌ನ ಬಂಧನದೊಂದಿಗೆ ಸೆರೆಗೀಡಾದ ಆರೋಪಿಗಳ ಸಂಖ 20ಕ್ಕೇರಿದೆ.