ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆ : ಇಬ್ಬರ ವಿರುದ್ಧ ನರಹತ್ಯಾಯತ್ನ ಕೇಸು
ಕುಂಬಳೆ: ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆಗೈದು, ಇರಿದು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಆರಿಕ್ಕಾಡಿ ಕುನ್ನಿಲ್ ನಿವಾಸಿ ಗಳಾದ ಫೈಸಲ್, ಇರ್ಶಾದ್ ಎಂಬಿ ವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ರಾತ್ರಿ ಆರಿಕ್ಕಾಡಿ ಕುನ್ನಿಲ್‌ನ ಹಮೀದ್ (31) ಎಂಬಿವರನ್ನು ಆರೋಪಿಗಳು ತಡೆದು ನಿಲ್ಲಿಸಿ ಹಲ್ಲೆಗೈದು, ಇರಿದು ಗಾಯಗೊಳಿಸಿ ರುವುದಾಗಿ ದೂರಲಾಗಿದೆ. ಗಾಯಾಳು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾದಕವಸ್ತು ಮಾರಾಟವನ್ನು ಪ್ರಶ್ನಿಸಿದ ದ್ವೇಷದಿಂದ ಆರೋಪಿಗಳು ತನ್ನ ಮೇಲೆ ದಾಳಿ ನಡೆಸಿರುವುದಾಗಿ ಹಮೀದ್ ಆರೋಪಿಸಿದ್ದಾರೆ.