ಪಂಜಾಬ್, ಯು.ಪಿ ಪೊಲೀಸರ ಜಂಟಿ ಕಾರ್ಯಾಚರಣೆ: ಮೂವರು ಖಾಲಿಸ್ತಾನಿ ಭಯೋತ್ಪಾದಕರ ಹತ್ಯೆ
ಲಕ್ನೋ: ಉತ್ತರಪ್ರದೇಶದ ಪಿಲಿಭಿತ್ತ್ ಜಿಲ್ಲೆಯಲ್ಲಿ ಉತ್ತರಪ್ರದೇಶ ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ನಡೆಸಿದ ಎನ್‌ಕೌಂಟ ರ್‌ನಲ್ಲಿ ಮೂವರು ಖಾಲಿಸ್ತಾನಿ ಭಯೋ ತ್ಪಾದಕರನ್ನು ಹೊಡೆ ದುರುಳಿಸಿದ್ದಾರೆ.
ಹತ್ಯೆಗೊಳಗಾದ ಉಗ್ರರನ್ನು ಗುರ್ವಿಂದರ್ ಸಿಂಗ್, ವೀರೇಂದ್ರ ಸಿಂಗ್ ಮತ್ತು ಜಸವ್ರಂತ್ ಸಿಂಗ್ ಎಂದು ಗುರು ತಿಸಲಾಗಿದೆ. ಇವರು ಖಾಲಿಸ್ತಾನಿ ಕಮಾಂಡೋ ಫೋಸ್ ಎಂಬ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸೇರಿದವ ರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‌ನ ಗುರುದಾಸ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದರು. ಆ ತಂಡದಲ್ಲಿ ಈ ಮೂವರು ಉಗ್ರರು ಶಾಮೀಲಾ ಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಬಳಿಕ ಇವರು ತಲೆಮರೆಸಿಕೊಂಡಿದ್ದರು. ಅವರ ಪತ್ತೆಗಾಗಿ ಪಂಜಾಬ್ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದರು. ಈ ಮಧ್ಯೆ ಈ ಉಗ್ರರು ಉತ್ತರಪ್ರದೇಶ ಪಿಲಿಭಿತ್ತ್ ಜಿಲ್ಲೆಯ ಘುರಾನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪ್ರದೇಶದ ಗುಪ್ತ ಕೇಂದ್ರದಲ್ಲಿ ತಲೆಮರೆಸಿ ಕೊಂಡಿರುವ ಬಗ್ಗೆ ಪಂಜಾಬ್ ಪೊಲೀಸರಿಗೆ ಗುಪ್ತ ಮಾಹಿತಿ ಲಭಿಸಿದೆ. ಅದರ ಜಾಡು ಹಿಡಿದ ಪಂಜಾಬ್ ಪೊಲೀಸರು ಉತ್ತರಪ್ರದೇಶ ಪೊಲೀಸರ ಸಹಾಯದೊಂದಿಗೆ ಅಲ್ಲಿಗೆ ಇಂದು ಮುಂಜಾನೆ ಆಗಮಿಸಿ ನಡೆಸಿದ ಎನ್‌ಕೌಂ ಟರ್‌ನಲ್ಲಿ ಆ ಮೂವರು ಖಾಲಿಸ್ತಾನಿ ಉಗ್ರರನ್ನು ಅಲ್ಲೇ ಹೊಡೆದುರುಳಿಸಿದ್ದಾರೆ. ಮಾತ್ರವಲ್ಲ ಆ ಪ್ರದೇಶದಿಂದ ಹಲವು ಶಸ್ತ್ರಾಸ್ತ್ರ ಗಳನ್ನು ಪತ್ತೆಹಚ್ಚಿ ವಶಪಡಿಸಿದ್ದಾರೆ.