ಪೆರ್ಲದಲ್ಲಿ ಭಾರೀ ಬೆಂಕಿ ಅನಾಹುತ: 9 ಅಂಗಡಿಗಳು ಉರಿದು ನಾಶ; 2 ಕೋಟಿಗೂ ಹೆಚ್ಚು ನಾಶನಷ್ಟ

ಪೆರ್ಲ: ಪೆರ್ಲ ಪೇಟೆಯ   ವ್ಯಾಪಾರ ಸಂಸ್ಥೆಗಳಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಿಂದ ಎರಡು ಕೋಟಿ ರೂಪಾಯಿಗಳಿಗಿಂತ ಹೆಚ್ಚು ನಷ್ಟ ಸಂಭವಿಸಿದೆಯೆಂದು ವ್ಯಾಪಾರಿಗಳು ತಿಳಿಸಿದ್ದಾರೆ. ಬೆಂಕಿ ಗಾಹುತಿಯಾದ ಒಂಭತ್ತು ಅಂಗಡಿಗಳಲ್ಲಿದ್ದ ಸುಮಾರು 1,85,30,000 ರೂಪಾಯಿಗಳ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಮೊನ್ನೆ ಮಧ್ಯರಾತ್ರಿ ಪೆರ್ಲಪೇಟೆಯ  ಬಿ. ಗೋಪಿನಾಥ್ ಪೈಯವರ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಟ್ಟಡದಲ್ಲಿದ್ದ ಪೈಂಟ್ ಅಂಗಡಿ, ಫ್ಯಾನ್ಸಿ ಅಂಗಡಿ, ಅಟೋಮೊಬೈಲ್ ಬಿಡಿ ಭಾಗಗಳ ಅಂಗಡಿ, ಗೋಪಿಕಾ ಟೆಕ್ಸ್‌ಟೈಲ್ಸ್, ಎ.ಕೆ.ಎಂ ತರಕಾರಿ ಅಂಗಡಿ, ಜ್ಯೂಸ್ ಅಂಗಡಿ ಮೊದಲಾದವುಗಳು ಪೂರ್ಣವಾಗಿ ಉರಿದು ನಾಶಗೊಂ ಡಿದೆ. ಅತೀ ಹೆಚ್ಚು ನಾಶನಷ್ಟ ಸಂಭವಿ ಸಿರುವುದು ಪ್ರವೀಣ್ ಆಟೋಮೊ ಬೈಲ್ ಶಾಪ್‌ಗಾಗಿದೆ. ಅಲ್ಲಿದ್ದ 88 ಲಕ್ಷ ರೂಪಾಯಿಗಳ ಸಾಮಗ್ರಿಗಳು, ಉಪಕರಣಗಳು ಹಾಗೂ ಪೀಠೋಪಕ ರಣಗಳು ಉರಿದು ನಾಶಗೊಂಡಿದೆ. ಕಟ್ಟಡದ ಮಾಲಕನಿಗೆ 21 ಲಕ್ಷ ರೂಪಾಯಿಗಳ ನಷ್ಟ  ಅಂದಾಜಿಸಲಾ ಗಿದೆ. ಸಾದತ್ ಸ್ಟೋರ್ಸ್‌ಗೆ  45 ಲಕ್ಷ ರೂಪಾಯಿಗಳ ನಷ್ಟವುಂಟಾ ಗಿದೆ ಎಂದು ತಿಳಿಸಲಾಗಿದೆ. ಮೊನ್ನೆ ಮಧ್ಯರಾತ್ರಿ 12 ಗಂಟೆ ವೇಳೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ಕಂಡ ನಾಗರಿಕರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಕಾಸರಗೋಡು, ಉಪ್ಪಳ, ಕಾಞಂಗಾಡ್, ಕುತ್ತಿಕ್ಕೋಲ್ ಎಂಬಿಡೆಗಳಿಂದ ತಲುಪಿದ ಆರು ಯೂನಿಟ್ ಅಗ್ನಿಶಾಮಕದಳ ನಿನ್ನೆ ಬೆಳಿಗ್ಗೆವರೆಗೆ ನಡೆಸಿದ  ಕಾರ್ಯಾಚರಣೆ ಯಲ್ಲಿ ಬೆಂಕಿ ನಂದಿಸಲು ಸಾಧ್ಯವಾ ಯಿತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ  ಅಂದಾಜಿ ಸಲಾಗಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page