ನಾಪತ್ತೆಯಾದ ಯುವಕ ಮುಂಬೈಯಲ್ಲಿ ಪತ್ತೆ
ಮಂಜೇಶ್ವರ: ನಾಪತ್ತೆಯಾಗಿದ್ದ ಯುವಕ ಮುಂಬೈಯಲ್ಲಿ ಪತ್ತೆಯಾಗಿ ದ್ದಾರೆ. ಕುಂಜತ್ತೂರು ನಿವಾಸಿ ಮೂಸರ ಪುತ್ರ ನೌಶಾದ್ (31) ಮುಂಬೈ ಯಲ್ಲಿರುವುದಾಗಿ ತಿಳಿದುಬಂದಿದೆ. ಈ ತಿಂಗಳ 16ರಂದು ಇವರು ನಾಪತ್ತೆ ಯಾದ ಬಗ್ಗೆ ಸಹೋದರ ಹನೀಫ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು. ಅವರಿಗಾಗಿ ಶೋಧ ನಡೆಸುತ್ತಿ ದ್ದಂತೆ ನೌಶಾದ್ ಮುಂಬೈಯಲ್ಲಿರುವು ದಾಗಿ ಅಲ್ಲಿರುವ ಸ್ನೇಹಿತರು ಮನೆಯವ ರಿಗೆ ಮಾಹಿತಿ ನೀಡಿದ್ದಾರೆ.