ಆರ್ಥಿಕ ಸಂದಿಗ್ಧತೆಯಲ್ಲಿದ್ದ ವ್ಯಕ್ತಿ ನೆರೆಮನೆಯ ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಆರ್ಥಿಕ ಸಂದಿ ಗ್ಧತೆಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊ ಬ್ಬರು ನೆರೆಮನೆಯ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೆಳ್ಳೂರು ನೆಟ್ಟಣಿಗೆ ಮುಂಡೂರು ನಿವಾಸಿ ಕೃಷ್ಣನ್ ಚೆಟ್ಟಿಯಾರ್ (64) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಮನೆಯಿಂದ ಇವರು ದಿಢೀರ್ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಶೋಧ ನಡೆಸಿದಾಗ ಅವರು ನೆರೆಮನೆಯ ಬಾವಿಗೆ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕಾಸರ ಗೋಡು ಅಗ್ನಿಶಾಮಕದಳ ತಲುಪಿ ಕೃಷ್ಣನ್ ಚೆಟ್ಟಿಯಾರ್‌ರನ್ನು ಮೇಲಕ್ಕೆತ್ತಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇ ಹವನ್ನು ಸ್ವ-ಗೃಹಕ್ಕೆ ಕಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.
ವಾಹನ ಅಪಘಾತಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತೆನ್ನಲಾಗಿದೆ. ಪ್ರಕರಣವನ್ನು ಇತ್ಯರ್ಥಗೊಳಿಸುವ ವ್ಯವಸ್ಥೆ ಪ್ರಕಾರ ಕೃಷ್ಣನ್ ಚೆಟ್ಟಿಯಾರ್‌ರ ಪುತ್ರ ಬೇರೊಬ್ಬ ವ್ಯಕ್ತಿಗೆ ನಿನ್ನೆ ಹಣ ನೀಡಬೇಕಾಗಿತ್ತು. ಇದರಂ ತೆ ನಿನ್ನೆ ಅವರನ್ನು ಠಾಣೆಗೆ ಹಾಜರಾ ಗುವಂತೆ ತಿಳಿಸಲಾಗಿತ್ತೆನ್ನ ಲಾಗಿದೆ. ಆದರೆ ಕೃಷ್ಣನ್ ಚೆಟ್ಟಿಯಾರ್ ಆರ್ಥಿಕವಾಗಿ ಸಂದಿಗ್ಧತೆಯಲ್ಲಿ ದ್ದರೆಂದೂ ಹೇಳಲಾಗುತ್ತಿದೆ. ಇದರಿಂದ ನಿನ್ನೆ ಪೊಲೀಸ್ ಠಾಣೆಗೆ ಅವರು ತೆರಳಿರಲಿಲ್ಲ. ಈ ಮಧ್ಯೆ ಅವರು ಬಾವಿಯಲ್ಲಿ ಬಿದ್ದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದಿ| ಕುಂಞಂಬು ಚೆಟ್ಟಿಯಾರ್-ಕಮಲ ದಂಪತಿಯ ಪುತ್ರನಾದ ಮೃತರು ಮಕ್ಕಳಾದ ನಿಶಾಂತ್, ನಿತೀಶ್, ದಿವ್ಯ, ಅಳಿಯ ರಮೇಶ್, ಸಹೋದರ-ಸಹೋದರಿಯರಾದ ಶ್ರೀಧರ, ದಾಮೋದರ, ಸುಶೀಲ, ಸಂಜೀವ, ಚಂದ್ರಶೇಖರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.