ಮಂಡಲಪೂಜೆ ನಾಳೆ ಮಧ್ಯಾಹ್ನ

ಶಬರಿಮಲೆ: ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಈ ಬಾರಿಯ ಮಂಡಲಪೂಜೆ ನಾಳೆ ನಡೆಯಲಿರುವುದು. ಮಧ್ಯಾಹ್ನ ೧೨ರಿಂದ ೧೨.೩೦ರ ಮಧ್ಯೆ ಪೂಜೆ ನಡೆಯಲಿದೆ. ಮಂಡಲಪೂಜೆಯ ಅಂಗವಾಗಿ ಅರನ್ಮುಳ ಶ್ರೀ ಪಾರ್ಥ ಸಾರಥಿ ಕ್ಷೇತ್ರದಿಂದ ಹೊರಟ ತಂಗ ಅಂಗಿ ಶೋಭಾಯಾತ್ರೆ ಇಂದು ಸಂಜೆ ಸನ್ನಿಧಾನಕ್ಕೆ ತಲುಪಲಿದೆ.  ಶೋಭಾಯಾತ್ರೆ ಇಂದು ಮಧ್ಯಾಹ್ನ 1.30ಕ್ಕೆ ಪಂಪಾಕ್ಕೆ ತಲುಪಲಿದೆ. ಅಲ್ಲಿಂದ ತಂಗಅಂಗಿಯನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿರಿಸಿ ಶಬರಿಮಲೆಗೆ ಕೊಂಡೊಯ್ಯಲಾಗುವುದು.  ಸಂಜೆ 6.40ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತಂಗಅಂಗಿ ತೊಡಿಸಿ ದೀಪಾರಾಧನೆ ನಡೆಯಲಿದೆ. ಇದೇ ವೇಳೆ ತಂಗಅಂಗಿ ಶೋಭಾಯಾತ್ರೆ ಸಂಜೆ ೫ ಗಂಟೆಗೆ ಶರಂಕುತ್ತಿಗೆ ತಲುಪಿದ ಬಳಿಕವೇ ಪಂಪಾದಿಂದ ತೀರ್ಥಾಟಕರಿಗೆ ಶಬರಿ ಮಲೆಗೆ ತೆರಳಲು ಅನುಮತಿ ಯಿರುವುದು.

You cannot copy contents of this page