ರಸ್ತೆ ಸಂಚಾರಕ್ಕೆ ಅಯೋಗ್ಯ: ಬದಿಯಡ್ಕ ಪಂ. 18ನೇ ವಾರ್ಡ್ ಗ್ರಾಮಸಭೆಗೆ ಸ್ಥಳೀಯರ ತಡೆ
ನೀರ್ಚಾಲು: ಬದಿಯಡ್ಕ ಪಂಚಾಯತ್ 18ನೇ ವಾರ್ಡ್ ಗ್ರಾಮ ಸಭೆಗೆ ಸ್ಥಳೀಯರು ತಡೆಯೊ ಡ್ಡಿದ ಘಟನೆ ನಡೆದಿದೆ. 23.12.2024ರಂದು ನಡೆಯಬೇಕಾಗಿದ್ದ 18ನೇ ವಾರ್ಡ್ ಗ್ರಾಮ ಸಭೆಯನ್ನು ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಕಡಂಬಳ ವಾರ್ಡ್‌ನಲ್ಲಿ ಅಭಿವೃದ್ಧಿ ವಿಷಯ ದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿ ದೆಯೆಂದು ಆರೋಪಿಸಿ ಸ್ಥಳೀಯರು ಒಟ್ಟಾಗಿ ಗ್ರಾಮ ಸಭೆಗೆ ತಡೆಯೊಡ್ಡಿದ್ದಾರೆ. ಹಲವು ವರ್ಷಗಳಿಂದ ಚಿಮ್ಮಿನಡ್ಕ-ಬೊಳುಂಬು-ಕುಂಜಾರು ರಸ್ತೆಯನ್ನು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥವಾಗಿ ಗ್ರಾಮ ಸಭೆಗೆ ತಡೆಯೊಡ್ಡಲಾಗಿದೆ. ಈ ರಸ್ತೆ ಕೇವಲ ಹೆಸರಿಗೆ ಮಾತ್ರವಾಗಿದ್ದು, ವಾಹನಗಳು ಸಾಗಲು ಸಾಧ್ಯವಾಗುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಎಂಡೋ ಸಲ್ಫಾನ್ ಸಂತ್ರಸ್ತರ ಸಹಿತ ವಿದ್ಯಾರ್ಥಿಗಳು, ಜನಸಾಮಾನ್ಯರು ದಿನವೂ ಉಪಯೋಗಿಸುತ್ತಿರುವ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಹಲವುಬಾರಿ ಸ್ಥಳೀಯ ಪ್ರತಿನಿಧಿ ಹಾಗೂ ಪಂಚಾಯತ್‌ಗೆ ಆಗ್ರಹಿಸಿದ್ದರೂ ಅದಕ್ಕೆ ಅಧಿಕಾರಿಗಳು ಕಿವಿಗೊಡಲಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಈ ಹಿನ್ನೆಲೆ ಯಲ್ಲಿ ರಸ್ತೆ ದುರಸ್ತಿಯಾಗದೆ ಗ್ರಾಮ ಸಭೆ ನಡೆಸುವುದು ಬೇಡ ಎಂದು ತಡೆಯೊಡ್ಡಿ ರುವುದಾಗಿ ಪ್ರತಿಭಟನೆಗೆ ನೇತೃತ್ವ ನೀಡಿದ ಶ್ಯಾಮ್ ಭಟ್ ಬೊಳುಂಬು, ಶೇಖರ, ಕೃಷ್ಣ ಮೂಲ್ಯ, ರಾಮ ಕುಂಜಾರು, ದಿನೇಶ್, ಭೂದೇವಿ, ವಿಜಯ ಮೊದ ಲಾದ ವರು ತಿಳಿಸಿದ್ದಾರೆ. ಪಂಚಾಯತ್ ಅಧ್ಯಕ್ಷೆ ಬಿ. ಶಾಂತಾ, ವಾರ್ಡ್ ಪ್ರತಿನಿಧಿ ಅಬ್ದುಲ್ ರಹ್ಮಾನ್ ಗ್ರಾಮ ಸಭೆಗೆ ತಲುಪಿದ್ದು, ಬಳಿಕ ರಸ್ತೆ ದುರಸ್ತ್ತಿ ಮಾಡುವ ಭರವಸೆ ನೀಡಿ ಹಿಂತಿರುಗಿ ರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇದೇ ವೇಳೆ ರಸ್ತೆ ಡಾಮ ರೀಕರಣಕ್ಕೆ ಹಲವು ಬಾರಿ ಟೆಂಡರ್ ಕರೆಯಲಾಗಿದೆಯೆಂದು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ತಿಳಿಸಿದ್ದಾರೆ. ಗುತ್ತಿಗೆ ವಹಿಸಿಕೊಳ್ಳಲು ಸಿದ್ಧವಾಗದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ನಡೆದಿಲ್ಲ ವೆಂದು ಅವರು ನುಡಿದರು. ಕೊನೆಗೆ ಪಂಚಾಯತ್ ಅಧ್ಯಕ್ಷೆ, ತಾನು ಗುತ್ತಿಗೆ ದಾರನಲ್ಲಿ ಮಾತುಕತೆ ನಡೆಸಿದ್ದು, ಕಾಮ ಗಾರಿ ನಡೆಸಲು ಒಪ್ಪಿಕೊಂಡಿರು ವುದಾಗಿಯೂ ಅವರು ತಿಳಿಸಿದರು. ಆದರೆ ಆರ್ಥಿಕ ಸಂದಿಗ್ಧತೆಯ ಹಿನ್ನೆಲೆಯಲ್ಲಿ ಸರಕಾರ ಟ್ರಷರಿ ನಿಯಂತ್ರಣ ಏರ್ಪಡಿಸಿರುವ ಕಾರಣ ಕಾಮಗಾರಿಗಳಿಗೆ ಹಣ ಲಭಿಸದಿರು ವುದು ಗುತ್ತಿಗೆದಾರರು ಕೆಲಸವನ್ನು ವಹಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿರುವುದಾಗಿ ಅವರು ತಿಳಿಸಿದರು.