ಮನೆ ಮುಂದೆ ಮಾರಕಾಯುಧಗಳೊಂದಿಗೆ ತಲುಪಿ ಬೆದರಿಕೆ: ನಾಲ್ಕು ಮಂದಿ ವಿರುದ್ಧ ಕೇಸು
ಕಾಸರಗೋಡು: ಮಾರಕಾಯುಧ ಗಳೊಂದಿಗೆ ಮನೆ ಪಕ್ಕದ ರಸ್ತೆಯಲ್ಲಿ ಜಮಾಯಿಸಿ ಮಹಿಳೆ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿದ ದೂರಿನಂತೆ ಕಾಸರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಡ್ಲು ಕೇಳುಗುಡ್ಡೆ ನಿವಾಸಿ ನಿರ್ಮಲ (55) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಡಿ. ೧೮ರಂದು ಆರೋಪಿಗಳು ತನ್ನ ಮನೆ ಮುಂದಿನ ರಸ್ತೆಯಲ್ಲಿ ಮಾರಕಾ ಯುಧಗಳೊಂದಿಗೆ ಜಮಾಯಿಸಿ ತನ್ನ ಹಾಗೂ ತನ್ನ ಕುಟುಂಬದವರಿಗೆ ಬೆದರಿಕೆ ಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ನಿರ್ಮಲ ಆರೋಪಿಸಿದ್ದಾರೆ.