ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ವಾರ್ಷಿಕೋತ್ಸವ 28ರಂದು
ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ಇದರ ೪೫ನೇ ವಾರ್ಷಿಕೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈತಿಂಗಳ 28ರಂದು ಜರಗಲಿದೆ. ಪ್ರಾತಃಕಾಲ ೬ ಗಂಟೆಗೆ ಗಣಪತಿ ಹೋಮ, ದೀಪಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ, 10 ಗಂಟೆಯಿಂದ ಕುಣಿತ ಭಜನೆ, 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡುವರು. ಮಧ್ಯಾಹ್ನ ಶರಣಂವಿಳಿ, ಮಹಾಪೂಜೆ, ಸಂಜೆ 5 ಗಂಟೆಗೆ ಚೆಂಡೆಮೇಳ, 6 ಗಂಟೆಗೆ ದೀಪಾರಾಧನೆ, ಭಜನೆ, 7 ಗಂಟೆಗೆ ನೀರ್ಚಾಲು ಶ್ರೀ ಕುಮಾರ ಸ್ವಾಮಿ ಭಜನಾ ಮಂದಿರದಿಂದ ಹುಲ್ಪೆ ಮೆರವಣಿಗೆ, ಕುಣಿತ ಭಜನೆ, ಚೆಂಡೆಮೇಳದೊಂದಿಗೆ ಹೊರಡು ವುದು, ರಾತ್ರಿ 9.30ಕ್ಕೆ ಶರಣಂವಿಳಿ, ಮಹಾಪೂಜೆ, 10ಗಂಟೆಯಿಂದ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ ಗಜೇಂದ್ರಮೋಕ್ಷ, ಪುರುಷಾಮೃಗ, ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದಶನಗೊಳ್ಳಲಿದೆ.